SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 12, 2024
ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಇದರಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಸಮಾಜ ಸ್ವಾಭಾವಿಕವಾಗಿ ಬೇಡಿಕೆಗಳನ್ನಿಟ್ಟುಕೊಂಡು ಮನವಿ ಸಲ್ಲಿಸುತ್ತಾರೆ. ಆದರೆ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕೆನ್ನುವುದು ಸರ್ಕಾರಕ್ಕೆ ತಿಳಿದಿರಬೇಕು. ಅದನ್ನು ಬಿಟ್ಟು ಪೊಲೀಸರು ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದರಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರದ ಕ್ರಮಕ್ಕೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ. ಸರ್ಕಾರ ಪ್ರತಿಭಟನಾಕಾರರ ಮೇಲೆ ಹಾಕಿರುವ ಕೇಸ್‌ನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಹಾಗೆಯೇ ಸರ್ಕಾರ ಪಂಚಮಸಾಲಿ ಮೀಸಲಾತಿ ಬೇಡಿಕೆ ಬಗ್ಗೆ ಕೂತು ಚರ್ಚೆಮಾಡಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನರ ಬಳಿ ಈ ವಿಚಾರದ ಬಗ್ಗೆ ಕ್ಷಮೆ ಕೋರಬೇಕು ಎಂದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನವೊಲಿಸಲು ವಯನಾಡಿನಲ್ಲಿ ನೂರು ಮನೆ ಕಟ್ಟಿ ಕೊಡುವುದಾಗಿ ಸಿ ಎಂ ಹೇಳಿಕೆ | ಮಾಜಿ ಡಿಸಿಎಂ ಕೆ,ಎಸ್ ಈಶ್ವರಪ್ಪ ಲೇವಡಿ
ವಯನಾಡಿಗೆ ನೂರು ಮನೆ ಕಟ್ಟಿ ಕೊಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಸಿದ್ದರಾಮಯ್ಯನವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಮನವೊಲಿಸಲು ಆ ತರ ಹೇಳಿದ್ದಾರೆ. ಹಾಗೆಯೇ ಮುಸಲ್ಮಾನರನ್ನು ತೃಪ್ತಿಪಡಿಸಲು ಇವರು ಹೊಟಿದ್ದಾರೆ. ನಮ್ಮ ರಾಜ್ಯದಲ್ಲೂ ಅನೇಕ ಮನೆಗಳು ಹಾಳಾಗಿವೆ. ಅವರಿಗೂ ಇನ್ನೂ ಪರಿಹಾರ ಬಂದಿಲ್ಲ ಅವರಿಗೆ ಮೊದಲು ಪರಿಹಾರ ನೀಡಲಿ. ಕರ್ನಾಟಕದಲ್ಲಿ ಮನೆ ಬಿದ್ದಿರೋ ಕಡೆ ಹೋಗಿ ಸಿಎಂ, ಡಿಸಿಎಂ ಹೋಗಿ ಸಮಸ್ಯೆ ಕೇಳಲಿಲ್ಲ. ರಾಹುಲ್ ಗಾಂಧಿ , ಸೋನಿಯಾ ಗಾಂಧಿ ತೃಪ್ತಿ ಪಡಿಸಲು ರಾಜ್ಯ ಸರ್ಕಾರದ ಅನುದಾನ ವಿನಿಯೋಗಿಸಬಾರದು ಎಂದರು.
SUMMARY | It is condemnable that the police resorted to lathicharge when Panchama Sali was fighting for reservation. Former Deputy CM KS Eshwarappa said that the state government and the police department have completely failed in this.
KEYWORDS | Panchama Sali, police department, Former Deputy CM KS Eshwarappa, cm siddaramaih,