SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 20, 2025
ಭಾರತದ ತಂಡದ ಸ್ಟಾರ್ ಆಟಗಾರರಾದ ರಿಷಬ್‌ಪಂತ್ ಇದೀಗ ಐಪಿಎಲ್ ಲಕ್ನೋ ಸೂಪರ್ ಜೆಂಟ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬಿಲ್ಡಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಬ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ಹಣ ಕೊಟ್ಟು ಖರೀದಿಸಿತ್ತು. ಇದರಿಂದಾಗಿ ರಿಷಬ್‌ಪಂತ್ ಐಪಿಎಲ್ ಇತಿಹಾಸದಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ರಿಷಬ್ ಪಂತ್‌ರನ್ನು ತನ್ನ ತಂಡದ ನೂತನ ನಾಯಕನನ್ನಾಗಿ ಆಯ್ಕೆಮಾಡಿದೆ.
ತಂಡ ಪ್ರಾರಂಭವಾದ ಮೊದಲಿನಿಂದಲೂ ಕನ್ನಡಿಗ ಕೆ ಎಲ್ ರಾಹುಲ್ ಲಕ್ನೋ ತಂಡದ ನಾಯಕರಾಗಿದ್ದರು. ನಂತರ ಇಬ್ಬರ ನಡುವೆ ಏನೋ ಮನಸ್ತಾಪವಾದ ಹಿನ್ನಲೆ ಲಕ್ನೋ ತಂಡ ಕೆ ಎಲ್ ರಾಹುಲ್‌ರನ್ನು ತಂಡದಿಂದ ಕೈ ಬಿಟ್ಟಿತ್ತು. ಇದೀಗ ಭಾರತ ತಂಡದಲ್ಲಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನಾಯಕನಾಗಿ ಅನುಭವವಿರುವ ರಿಷಬ್ ಪಂತ್ ಲಕ್ನೋ ತಂಡದ ನಾಯಕನಾಗಿದ್ದು. ತಂಡವನ್ನು ಯಾವ ರೀತಿ ಮುನ್ನಡೆಸಲಿದ್ದಾರೆ ಎಂದು ಕಾದು ನೋಡಬೇಕಿದೆ
SUMMARY | Rishabh Pant has been named as the new captain of The Lucknow Supergiants in the Indian Premier League (IPL).
KEYWORDS | Rishabh Pant, Lucknow Supergiants, IPL,