SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 25, 2025
ನಿಯೋಜಿತ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಮುಂದುವರೆಯಲು ಬೇಡಿಕೆ ಇಟ್ಟಿದ್ದ ಪೇದೆಯಿಂದ ಲಂಚ ಪಡೆಯುತ್ತಿದ್ದ ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ (ಡಿ.ಎ.ಅರ್) ಡಿಎಸ್ಪಿ ಕೃಷ್ಣಮೂರ್ತಿಯನ್ನು ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪೊಲೀಸ್ ಪೇದೆ ಪ್ರಸನ್ನರವರು ಭದ್ರಾವತಿಯ ಟ್ರೆಜರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅದೇ ಸ್ಥಳದಲ್ಲಿ ಮುಂದುವರೆಯುವಂತೆ ಮಾಡಿ ಎಂದು ಡಿ.ಎ.ಅರ್ ಡಿಎಸ್ಪಿ ಕೃಷ್ಣಮೂರ್ತಿಯವರಿಗೆ ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಕೃಷ್ಣಮೂರ್ತಿಯವರು ಐದು ಸಾವಿರ ಲಂಚ ಕೊಡುವಂತೆ ಕೇಳಿದ್ದಾರೆ. ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ್ದು, ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
SUMMARY | D.A.R.D.S.P. Krishnamurthy was caught red-handed by the Lokayukta while accepting a bribe from a constable who had demanded to continue as a police man at the designated place.
KEYWORDS | Krishnamurthy, Lokayukta, constable,