SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 3, 2025
ಮಂಚು ವಿಷ್ಣು ಅಭಿನಯದ ಕಣ್ಣಪ್ಪ ಚಿತ್ರತಂಡ ಪ್ರಭಾಸ್‌ರ ಫಸ್ಟ್ ಲುಕ್ ಪೋಸ್ಟರ್‌ನ್ನು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಪ್ರಭಾಸ್ ರುದ್ರ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದುನ್ನು ಪೋಸ್ಟರ್ ಮೂಲಕ ನೋಡಬಹುದು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಹಿಂದಿಯ ಅಕ್ಷಯ್ ಕುಮಾರ್ ಮಳಯಾಳಂನ ಮೋಹನ್ ಲಾಲ್, ಕಾಜಲ್ ಅಗರ್ವಲ್ ಸೇರಿದಂತೆ ಘಟಾನುಘಟಿ ನಾಯಕರು ಗೆಸ್ಟ್ ಅಫಿಯರೆನ್ಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪ್ರಭಾಸ್ ಈ ಚಿತ್ರದಲ್ಲಿ ಶಿವನ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತಿತ್ತು. ಆದರೆ ಚಿತ್ರತಂಡ ಅಕ್ಷಯ್ ಕುಮಾರ್ ಅವರ ಶಿವನ ಪೋಸ್ಟ್‌ರ್‌ನ್ನು ಬಿಡುಗಡೆಗೊಳಿಸಿದ ನಂತರ ಈ ಎಲ್ಲ ಅನುಮಾನಗಳಿಗೂ ತೆರೆ ಬಿದ್ದಿತ್ತು. ನಂತರ ಪ್ರಭಾಸ್ ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಕಾದು ಕುಳಿತಿದ್ದರು. ಆದಕ್ಕೆ ಚಿತ್ರತಂಡ ಪ್ರಭಾಸ್ ರವರು ದೇವರ ರಕ್ಷಕ ರುದ್ರನ ಪಾತ್ರವನ್ನು ನಿರ್ವಹಿಸುವ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದೆ.
ॐ The Mighty ‘Rudra’ ॐ
Unveiling Darling-Rebel Star ???????????????????????????? as ‘????????????????????’ ????, a force of divine strength, wisdom, and protector in #Kannappa????. ✨
Embark on an extraordinary journey of devotion, sacrifice, and unwavering love.
Witness this epic saga on the big screen… pic.twitter.com/wcg7c3ulxd
— Kannappa The Movie (@kannappamovie) February 3, 2025
ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಪಾರ್ವತಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಯಕಿಯಾಗಿ ಪ್ರೀತಿ ಮುಕುಂದನ್ ಅಭಿನಯಿಸುತ್ತಿದ್ದಾರೆ. ಪೋಸ್ಟ್‌ರ್‌ನಲ್ಲಿ ಅರ್ಧ ಚಂದ್ರಾಕ್ರುತಿಯ ಆಯುದವನ್ನು ಹಿಡಿದುಕೊಂಡು ಹಣೆಗೆ ವಿಭೂತಿ ಕುಂಕುಮ ಹಾಗೂ ರುದ್ರಾಕ್ಷಿ ಮಾಲೆಯನ್ನು ಧರಿಸಿಕೊಂಡು ರಗಡ್ ಲುಕ್‌ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಪೋಸ್ಟರ್‌ನಲ್ಲಿ ಅವನು ಎರಳಿದ ಚಂಡಮಾರುತ ಅವನು ಭೂತಕಾಲ ಮತ್ತು ಭವಿಷ್ಯದ ಮೂಲಕ ಮಾರ್ಗದರ್ಶಿ. ಅವನು ಶಿವನ ಮೂಲಕ ಆಳಲ್ಪಡುತ್ತಾನೆ ಎಂದು ಬರೆಯಲಾಗಿದೆ. ಈ ಟ್ಯಾಗ್‌ಲೈನ್ ಪ್ರಭಾಸ್‌ರ ಪಾತ್ರ ಚಿತ್ರದಲ್ಲಿ ಯಾವ ಮಟ್ಟಿಗೆ ಇರಲಿದೆ ಎಂಬುದನ್ನು ತಿಳಿಸುತ್ತದೆ.
ಬಿಗ್ ಬಜೆಟ್‌ನ ಈ ಚಿತ್ರವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಕನ್ನಡ ತೆಲುಗು ತಮಿಳು ಮಳಯಾಳಂ ಹಿಂದಿ ಭಾಷಎಯಲ್ಲಿ ಏಪ್ರಿಲ್ 25 ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
SUMMARY | The makers of Manchu Vishnu starrer Kannappa have released the first look poster of Prabhas.
KEYWORDS | Manchu Vishnu, Prabhas, Kannappa, first look poster,