SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 19, 2025
ರಸ್ತೆಯ ನಡುವಲ್ಲಿ ಬೀಕರ ಕೊಲೆ ದೃಶ್ಯಾವಳಿಗಳನ್ನು ಚಿತ್ರಿಸಿ ವೈರಲ್ ಮಾಡಿರುವ ಇಬ್ಬರು ಯುವಕರನ್ನು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಬಂದಿಸಿರುವ ಘಟನೆ ಕಲುಬುರುಗಿಯಲ್ಲಿ ನಡೆದಿದೆ.
ಏನಿದು ಘಟನೆ
ಸಾಯಿಬಣ್ಣ ಹಾಗೂ ಸಚಿನ್ ಶಿಂದೆ ಎನ್ನುವವರು ಇಬ್ಬರು ಸೇರಿಕೊಂಡು ಮೆಂಟನ್ ಮಜನು ಎಂಬ ಕಿರುಚಿತ್ರವನ್ನು ತೆಗೆದಿದ್ದಾರೆ. ಆ ಕಿರುಚಿತ್ರದಲ್ಲಿ ಕಲಬುರಗಿ ನಗರದ ಹುಮನಾಬಾದ ರಿಂಗ್ ರಸ್ತೆಯ ನಡು ರಸ್ತೆಯಲ್ಲಿ ಬಣ್ಣವೊಂದನ್ನು ಹಚ್ಚಿಕೊಂಡು ಅರೆ ಬೆತ್ತಲೆಯಾಗಿ ರಕ್ತಸಿಕ್ತ ದೇಹದ ಮೇಲೆ ಕುಳಿತು ವ್ಯಕ್ತಿಯೊಬ್ಬ ಕೈಯಲ್ಲಿ ಕಬ್ಬಿಣದ ಸುತ್ತಿಗೆ ಹಿಡಿದುಕೊಂಡು ಭೀಕರವಾಗಿ ಕೊಲೆ ಮಾಡಿ ಜೋರಾಗಿ ಕೂಗಾಡುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಆ ದೃಶ್ಯ ರಾತ್ರೋ ರಾತ್ರಿ ವೈರಲ್ ಆಗಿದ್ದು, ಇದನ್ನು ನೋಡಿದ ಕಲುಬುರುಗಿಯ ಜನತೆ ಹಾಗೂ ಪೊಲೀಸರು ಬೆಚ್ಚಿಬಿದ್ದಿದ್ದಾರೆ.ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯರಿಗೆ ಮಾಹಿತಿ ತಿಳಿಸದೆ ಇಂತಹ ಭಯಾನಕ ಚಿತ್ರೀಕರಣವನ್ನು ಚಿತ್ರಿಸಿದ ಹಿನ್ನಲೆ ಯುವಕರ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
SUMMARY | Police have registered a suo motu case against two youths for allegedly filming the murder footage and making it viral.
KEYWORDS | suo motu, case, murder footage, reels,