SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 28, 2025
ಶಿವಮೊಗ್ಗ | ದೀಪಕ್ ಸುಬ್ರಹ್ಮಣ್ಯ ನಾಯಕನಾಗಿ ಅಭಿನಯಿಸಿರುವ ಮಿಸ್ಟರ್ ರಾಣಿ ಚಿತ್ರ ಇದೆ ಫೆಬ್ರವರಿ 7 ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಈ ಹಿಂದೆ ಚಿತ್ರದ ನಾಯಕ ನಟ ಮಹಿಳಾ ವೇಷ ಧರಿಸಿದ ವಿಭಿನ್ನ ಪೊಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಪೋಸ್ಟರ್ ಎಲ್ಲೆಡೆ ಸಂಚಲನವನ್ನು ಸೃಷ್ಟಿಸಿತ್ತು. ಇದರ ನಡುವೆ ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು , ಚಿತ್ರದ ಮೇಲೆ ಜನರ ನಿರೀಕ್ಷೆ ಹೆಚ್ಚಿತ್ತು. ಸಿನಿಮಾದಲ್ಲಿ ನಟನೆ ಮಾಡಬೇಕೆಂದು ಆಸೆ ಹೊಂದಿರುವ ಯುವಕನಿಗೆ ಸಿನಿಮಾದಲ್ಲಿ ಅವಕಾಶ ಸಿಗುವುದಿಲ್ಲ. ಹಾಗಾಗಿ ಆ ಯುವಕ ಯುವತಿಯ ವೇಷಧರಿಸಿ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ಸೂಪರ್ ಸ್ಟಾರ್ ಆಗುತ್ತಾನೆ. ನಂತರ ಅದರಿಂದಾಗಿ ಆತ ಅನುಭವಿಸುವ ಕಷ್ಟವೇನು ಎಂಬವುದು ಸಿನಿಮಾದ ಒನ್ ಲೈನ್ ಸ್ಟೋರಿಯಾಗಿದೆ.
ಈ ಚಿತ್ರದ ನಿರ್ದೇಶವನ್ನು ಮಧುಚಂದ್ರ ಆರ್ ಮಾಡಿದ್ದು, ನಾಯಕಿಯಾಗಿ ಬಹುಭಾಷಾ ತಾರೆ ಪಾರ್ವತಿ ನಾಯರ್ ಅಭಿನಯಿಸಿದ್ದಾರೆ. ಹಾಗೆಯೇ ಮುಖ್ಯ ಪಾತ್ರಗಳಲ್ಲಿ ಲಕ್ಷ್ಮಿ ಕಾರಂತ್, ಶ್ರೀವತ್ಸ, ಮಧುಚಂದ್ರ, ಆನಂದ್ ನಿನಾಸಂ ಅಭಿನಯಿಸಿದ್ದಾರೆ.ಚಿತ್ರಕ್ಕೆ ಸಂಗೀತವನ್ನು ಜೂಡ ಸ್ಯಾಂಡಿ ಮತ್ತು ಋಥ್ವಿಕ್ ಮುರುಳಿಧರ್ ಮಾಡಿದ್ದು,ಕ್ಯಾಮೆರಾಮೆನ್ ಆಗಿ ರವೀಂದ್ರನಾಥ್ ಕೆಲಸ ಮಾಡಿದ್ದಾರೆ.
SUMMARY | Starring Deepak Subramanya in the lead role, Mr. Rani is slated to release across the state on February 7.
KEYWORDS | Deepak Subramanya, Mr. Rani, February 7,