SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 16, 2024
ಶಿವಮೊಗ್ಗ | ಪತ್ರಿಷ್ಟೆಯ ರಾಜಕಾರಣಕ್ಕೆ ಸಾಕ್ಷಿಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಇವತ್ತು ಶಿವಮೊಗ್ಗದಲ್ಲಿ ಜೋರಾಗಿ ನಡೆಯುತ್ತಿದೆ. ಬೆಳಗ್ಗೆ 9:00 ರಿಂದ ಆರಂಭವಾಗಿರುವ ಚುನಾವಣೆಯಲ್ಲಿ ಸರ್ಕಾರಿ ನೌಕರರು ಬಿರುಸಿನ ಮತದಾನ ಮಾಡುತ್ತಿದ್ದು ಉತ್ಸಾಹದಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೆ.
ಸಂಜೆ 4ರ ವರೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ನಡೆಯಲಿದೆ. ಸರ್ಕಾರಿ ನೌಕರರಸಂಘದ ಜಿಲ್ಲಾ ಘಟಕದಲ್ಲಿರುವ ಒಟ್ಟು 68 ನಿರ್ದೇಶಕರ ಸ್ಥಾನಗಳ ಪೈಕಿ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಇವತ್ತು ಚುನಾವಣೆ ನಡೆಯುತ್ತಿದೆ.
ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರತಿಷ್ಟೆ ಕಣವಾಗಿ ಮಾರ್ಪಟ್ಟಿದ್ದು, ಸಚಿವರು ಹಾಗೂ ಹಾಲಿ ರಾಜ್ಯಾಧ್ಯಕ್ಷರ ಬಣಗಳ ನಡುವಿನ ಫೈಟ್ ಎಂದೇ ಬಿಂಬಿಸಲಾಗುತ್ತಿದೆ. ಈ ನಡುವೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಲಾಗ್ತಿದೆ ಎಂಬ ಆರೋಪಗಳು ಸಹ ಕೇಳಿಬಂದಿತ್ತು. ಇನ್ನೊಂದು ಬಣ ಬದಲಾವಣೆ ಜೋರು ಸುದ್ದಿಯಾಗಿತ್ತು. ಇವೆಲ್ಲದರ ನಡುವೆ ಇದೀಗ ಎಲೆಕ್ಷನ್ ನಡೆಯುತ್ತಿದ್ದು ಅಂತಿಮವಾಗಿ ಯಾರ ಕೈ ಮೇಲಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
SUMMARY| Karnataka State Government Employees Association Shimoga branch director election
KEY WORDS | Karnataka State Government Employees Association Shimoga branch director election