SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 13, 2025
ಶಿವಮೊಗ್ಗ| ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಆ ಸರ್ಕಾರಕ್ಕೆ ಜನರನ್ನೂ ರಕ್ಷಿಸಲಾಗುತ್ತಿಲ್ಲ ಇತ್ತ ಗೋವುಗಳನ್ನೂ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚೆನ್ನಬಸಪ್ಪ ವಾಗ್ದಾಳಿ ನಡೆಸಿದರು.
ಇಂದು ಶಿವಮೊಗ್ಗದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅದೇನೆಂದರೆ ದುಷ್ಕರ್ಮಿಗಳು ಗೋವಿನ ಕೆಚ್ಚಲನ್ನು ಕತ್ತರಿಸಿದ್ದಾರೆ. ಗೋವುಗಳ ರಕ್ಷಣೆ ಮಾಡಬೇಕೆಂದು ಕಾನೂನಿನಲ್ಲಿ ಕಾಯ್ದೆಗಳು ಇದ್ದರೂ ಸಹ ಇದರ ನಡುವೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಈ ದುಷ್ಕೃತ್ಯ ನಡೆದಿರುವುದು ಅಮಾನವೀಯ ಎಂದರು.
ಈ ಹಿಂದೆ ಮುಸ್ಲಾನರು ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಿದ್ದರು ಈಗ ಗೋವಿನ ಕೆಚ್ಚಲಿಗೆ ಕೈಹಾಕಿ ಗೋವುಗಳ ಮಾರಣಹೋಮ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಸಲ್ಮಾನರಿಗೆ ಪ್ರತ್ಯೇಕ ದೇಶವಿದ್ದರೂ ಸಹ ಇಲ್ಲಿ ಬದುಕಲು ಭಾರತ ಜಾಗ ಕೊಟ್ಟಿದೆ. 20 ಪರ್ಸೆಂಟ್ ಹಿಂದೂಗಳು ಇರುವ ಜಾಗದಲ್ಲಿ ಈ ಘಟನೆ ನಡೆದಿದ್ದು, ಆ ಸ್ಥಳದಲ್ಲಿರುವ ಹಿಂದೂಗಳನ್ನು ಪೂರ್ಣ ಪ್ರಮಾಣದಲ್ಲಿ ನಾಶಗಳಿಸಲು ಮುಸಲ್ಮಾನರು ಹುನ್ನಾರ ನಡೆಸುತ್ತಿದ್ದಾರೆ..
ವಿನಾಯಕ ನಗರದಲ್ಲಿ ಡ್ರಗ್ ಮಾಫಿಯಾ ಕೂಡಾ ಹೆಚ್ಚಾಗಿ ನಡೆಯುತ್ತಿದೆ. ಡ್ರಗ್ಸ್ ಸೇವಿಸಿ ಆರೀತಿಯ ಮಾನಸಿಕತೆ ಇರುವ ವ್ಯಕ್ತಿಗಳಿಂದ ಮಾತ್ರ ಇಂಥಹ ಕೃತ್ಯಗಳನ್ನು ಮಾಡಲು ಸಾಧ್ಯ. ಈ ಕೃತ್ಯದಲ್ಲಿ ದುಷ್ಕರ್ಮಿಗಳು ತುಂಬಾ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.ಹಸುಗಳು ಮೂತ್ರ ವಿಸರ್ಜಿಸುವ ಜಾಗಕ್ಕೆ ಸರಳನ್ನು ಹಾಕುವ ಕೃತ್ಯವನ್ನು ಮಾಡಿದ್ದಾರೆ. ಇಷ್ಟೆಲ್ಲಾ ಕೃತ್ಯ ನಡೆಯುತ್ತಿದ್ದರು ರಾಜ್ಯ ಸರ್ಕಾರ ಈ ರಾಜ್ಯದಲ್ಲಿ ಸತ್ತು ಹೋಗಿದೆ. ಆ ಸರ್ಕಾರಕ್ಕೆ ಮನುಷ್ಯರನ್ನು ಕಾಪಾಡಲೂ ಸಾಧ್ಯವಿಲ್ಲ ಇತ್ತ ಗೋವುಗಳನ್ನು ಕಾಪಾಡಲು ಸಾಧ್ಯವಿಲ್ಲ ಎಂದರು.
ಮುಸಲ್ಮಾನರನ್ನು ಎದುರು ಹಾಕಿಕೊಳ್ಳಲು ತಾಕತ್ತಿಲ್ಲದ ಷಂಡತನದ ಸರ್ಕಾರ
ಈ ಹಿಂದೆ ರಾಜ್ಯಕ್ಕೆ 70 ಹೊಸ ಗೋಶಾಲೆಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು. ರಾಜ್ಯ ಸರ್ಕಾರ ಅದಕ್ಕೆ ಜಮೀನು ಮಂಜೂರಾಗಿದ್ರೂ ಸಹ ಅದನ್ನು ರದ್ದು ಮಾಡಿದೆ ರಾಜ್ಯ ಸರ್ಕಾರದ ಆ ನಡೆ ದುಷ್ಕರ್ಮಿಗಳಿಗೆ ಈ ಕೃತ್ಯಕ್ಕೆ ನಡೆಸಲು ಪ್ರೇರೀಪಿಸಿದೆ. ರಾಜ್ಯ ಸರ್ಕಾರದಿಂದ ಗೋವಿನ ಸಂತತಿಯನ್ನು ರಕ್ಷಿಸಲು ಸಾಧ್ಯವಿಲ್ಲ.ಇಂತಹ ಕೃತ್ಯಗಳನ್ನು ಮಾಡಬಾರದೆಂದು ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಬುದ್ದಿವಾದ ಹೇಳಬೇಕು ಆದರೆ ಮುಸಲ್ಮಾನರನ್ನು ಎದುರು ಹಾಕಿಕೊಳ್ಳಲು ತಾಕತ್ತಿಲ್ಲದ ಷಂಡತನದ ಸರ್ಕಾರ ಇದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.ಇದರ ಬಗ್ಗೆ ನಾವು ಹೋರಾಟ ಮಾಡಲಿಕ್ಕೆ ಪ್ರಾರಂಭಿಸಿದರೆ ಸರ್ವನಾಶ ಖಂಡಿತ ಎಂದರು.
SUMMARY | The Congress government in the state is dead. Shivamogga city MLA S N Chennabasappa lashed out at the state government, saying that the government was not able to protect the people and also the cows.
KEYWORDS | Congress government, MLA S N Chennabasappa,politicalnews,