SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 14, 2024
ಮೈಸೂರಿನಲ್ಲಿ ಇತ್ತೀಚೆಗೆ ನಡೆದ 62 ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ಲ್ಲಿ ಮಂಡಗದ್ದೆಯ ಜುಲ್ಫುರವರ ಮಗ ಸೈಯದ್ ಫೈಸಲ್ ದೇಶಕ್ಕೆ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಕರ್ನಾಟಕ ರಾಯಲ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಈ ರಾಯಲ್ ಸ್ಕೇಟಿಂಗ್ ಪಂದ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಟೂರ್ನಿಯಲ್ಲಿ ದೇಶದ 28 ರಾಜ್ಯಗಳಿಂದ 1500 ಮಕ್ಕಳು ಭಾಗವಹಿಸಿದ್ದರು. ಅಂತಿಮವಾಗಿ ಹರಿಯಾಣ, ಡೆಲ್ಲಿ, ಕರ್ನಾಟಕದ ಕ್ರೀಡಾಪಟುಗಳು ಫೈನಲ್ ತಲುಪಿದ್ದರು. ಕರ್ನಾಟಕದಿಂದ ಸ್ಫರ್ಧಿಸಿದ್ದ ಸೈಯದ್ ಫೈಝಲ್ ಉತ್ತಮ ಪ್ರದರ್ಶನವನ್ನು ತೋರಿದರು. ಕರ್ನಾಟಕದ ಸೈಯದ್ ಫೈಸಲ್ರವರಿಗೆ ಇದರಲ್ಲಿ ಪ್ರಥಮ ಸ್ಥಾನ ಪಡೆಯುವ ಸಾಧ್ಯತೆಗಳಿದ್ದರೂ ಸಹ ಅಂತಿಮ ಹಂತದಲ್ಲಿ ಹರಿಯಾಣದ ಆಟಗಾರ ಪ್ರಥಮ ಬಹುಮಾನ ಗೆದ್ದಿದ್ದಾರೆ. ಫೈಸಲ್ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡರು.

ಇದುವರೆಗೆ ಇನ್ಲೈನ್ ಸ್ಕೇಟಿಂಗ್ನಲ್ಲಿ ಶಿವಮೊಗ್ಗದಿಂದ ರಾಷ್ಟ್ರಮಟ್ಟದಲ್ಲಿ ಯಾರೂ ಪದಕ ಪಡೆದಿರಲಿಲ್ಲ, ಆದರೆ ಫೈಸಲ್ ಈ ಪದಕ ಪಡೆದಿದ್ದಾರೆ,ಈ ಯುವಕನ ಕ್ರೀಡಾಸಕ್ತಿ ಅದರಲ್ಲಿರುವ ಶ್ರದ್ದೆ ನೋಡಿದರೆ ಮುಂದೊಂದು ದಿನ ಈತ ದೇಶದ ಉತ್ತಮ ಕ್ರೀಡಾತಾರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ
SUMMARY | Syed Faizal, son of Zulfikar of Mandagadde, won the silver medal in the 62nd National Roller Skating Championship held in Mysuru recently.
KEYWORDS | Syed Faizal, National Roller Skating Championship, Mysuru silver medal, Mandagadde,