SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 16, 2024
ಚಿಕ್ಕಮಗಳೂರು | ಬಾಲಿವುಡ್‌ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ರಂಭಾಪುರಿ ಮಠಕ್ಕೆ ಸುಮಾರು 10 ಲಕ್ಷ ಮೌಲ್ಯದ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಆನೆಯನ್ನು ರಂಭಾಪುರಿ ಮಠದ ಶ್ರೀ ಡಾ. ವೀರಸೋಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು.
ಏನಿದು ರೋಬೋಟಿಕ್ ಆನೆ ನೋಡಲು ಹೇಗಿರುತ್ತೆ
ಈ ರೋಬೋಟಿಕ್ ಆನೆ ನೋಡಲು ಸೇಮ್ ನಿಜ ಆನೆಯ ರೀತಿಯೇ ಇದೆ. ಸೊಂಡಿಲು, ಕಿವಿ ಹಾಗೂ ಬಾಲವನ್ನು ಅಲ್ಲಾಡಿಸಬಲ್ಲ ಈ ಆನೆ ಸದ್ಯ ಜನರನ್ನು ಆಕರ್ಷಿಸುತ್ತಿದೆ. ಮಠದಲ್ಲಿ ಇದಕ್ಕಾಗಿ ಒಂದು ಪ್ರತ್ಯೇಕ ಶೆಡ್ ಅನ್ನು ನಿರ್ಮಿಸಲಾಗಿದೆ.
ಶಿಲ್ಪಾಶೆಟ್ಟಿ ರಿಯಲ್ ಆನೆಯನ್ನು ನೀಡಬೇಕು ಎಂದುಕೊಂಡಿದ್ದರು, ಆದರೆ ಕಾನೂನಿನ ನಿಮಮಗಳಿಗೆ ಅಡ್ಡಿಯಾಗಬಹುದೆಂದು ಈ ರೋಬೋಟಿಕ್ ಆನೆಯನ್ನು ನೀಡಿದ್ದಾರೆ ಎನ್ನಲಾಗಿದೆ.
SUMMARY | Bollywood actress Shilpa Shetty has donated a robotic elephant worth rs 10 lakh to Rambhapuri Mutt in NR Pura taluk of Chikkamagaluru district.
KEYWORDS | Shilpa Shetty, NR Pura, robotic, elephant, kannadanews,