ಯುವಕನ ಮೇಲೆ ಏಕಾಏಕಿ ಗುಂಡಿನ ದಾಳಿ | ಆಘಾತಕಾರಿ ವಿಡಿಯೋ ವೈರಲ್

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 15, 2025

ಯುವಕನೋರ್ವನ ಮೇಲೆ  ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಗೈದಿರುವ ಘಟನೆ ಉತ್ತರ ಪ್ರದೇಶದ ಆಲಿಗಡ ಎಂಬಲ್ಲಿ  ನಡೆದಿದ್ದು, ಬೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 25 ವರ್ಷದ ಹ್ಯಾರಿಸ್ ಅಲಿಯಾಸ್ ಕಟ್ಟಾ  ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.



ವಿಡಿಯೋದಲ್ಲಿರುವಂತೆ ಇಬ್ಬರು ಯುವಕರು ಶುಕ್ರವಾರ ಬೆಳಿಗ್ಗೆ ಸರಿಸುಮಾರು 3 ಗಂಟೆಯ ಸುಮಾರಿಗೆ ಮಾತನಾಡುತ್ತಾ ನಿಂತಿರುತ್ತಾರೆ. ಆ ವೇಳೆ ಬೈಕ್ ನಲ್ಲಿ ಬಂದ 4 ಜನ ಮುಸುಕುದಾರಿಗಳು ಒಮ್ಮೆಲೆ  ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲು ಶುರುಮಾಡಿದ್ದಾರೆ. ಆ ವೇಳೆ ಅದರಲ್ಲಿ ಒಬ್ಬ ಸ್ಥಳದಿಂದ ಪರಾರಿಯಾಗುತ್ತಾನೆ. ಮತ್ತೋರ್ವನಿಗೆ  ಗುಂಡಿನ ಏಟು ತಗುಲಿ ಆತ ಕೆಳಗೆ ಬೀಳುತ್ತಾನೆ. ಆತನ ಮೇಲೆ ದುಷ್ಕರ್ಮಿಗಳು ನಾಲ್ಕೈದು ಬಾರಿ ಗುಂಡಿನ ದಾಳಿ ನಡೆಸಿ ಪರಾರಿಯಾಗುತ್ತಾರೆ. ಇದರಿಂದಾಗಿ ಹ್ಯಾರಿಸ್ ಅಲಿಯಾಸ್ ಕಟ್ಟಾಎಂಬಾತ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

SUMMARY | A youth was shot dead by unidentified assailants in Uttar Pradesh’s Aligarh district

KEYWORDS | shot, Uttar Pradesh, youth,  viral video,

Share This Article