SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 26, 2024
ಶಿವಮೊಗ್ಗ | ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಮೊಬೈಲ್ ವಿಚಾರಕ್ಕಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೋಷಕರಲ್ಲಿ ಆತಂಕ ಸೃಷ್ಠಿಸಿದೆ. ಈಗಿನ ಯುವಜನತೆ ಒಂದು ಹೊತ್ತು ಊಟಬಿಟ್ಟರೂ ಮೈಬೈಲ್‌ನ್ನು ಮಾತ್ರ ಬಿಡುವುದಿಲ್ಲ ಎಂಬುದು ಮನೆಯಲ್ಲಿರುವ ಹಿರಿಯರ ಅಭಿಪ್ರಾಯ ಅಷ್ಟರ ಮಟ್ಟಿಗೆ ಯುವ ಪೀಳಿಗೆ ಮೊಬೈಲ್‌ಗೆ ಅಡಿಕ್ಟ್ ಅಗಿವೆ. ಇದರ ನಡುವೆ ಮೊಬೈಲ್‌ನ್ನು ಮುಟ್ಟಬೇಡಿ ಎಂದು ಪೋಷಕರು ಹೇಳಿದರೆ ಸಾಕು ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೇಸ್ ಈಗ ಹೆಚ್ಚಾಗ್ತಾ ಇದೆ. ಅದೇ ರೀತಿ ಇಲ್ಲೊಬ್ಬ ಯುವತಿ ಮನೆಯಲ್ಲಿ ಪೋಷಕರು ಮೊಬೈಲ್ ಹಾಗೂ ಟಿವಿ ನೋಡಬೇಡ ಎಂದಿದ್ದಕ್ಕೆ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿ ನಡೆದಿದೆ. ಏನಿದು ಘಟನೆ ಇದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ.
20 ವರ್ಷದ ಧನುಶ್ರೀ ಎಂಬ ಯುವತಿ ಕಾಲೇಜು ಮುಗಿಸಿ ಮನೆಗೆ ಬಂದು ಮೊಬೈಲ್ ನೋಡ್ತಾ ಕುಳಿತಿದ್ದಾರೆ. ಈ ವೇಳೆ ಯುವತಿಯ ತಾಯಿ ಬಂದು ಏನಮ್ಮ ಯಾವಗಲೂ ಮೊಬೈಲ್ ನೊಡ್ತಾ ಇರ್ತಿಯಲ್ಲಾ ಏನಾದರೂ ಕೆಲಸ ಮಾಡ್ಬಾರ್ದಾ ಒದ್ಕೋಬಾರ್ದಾ ಎಂದು ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೆ ಯುವತಿ ಮನನೊಂದು ಹೋಗಿ ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕಳೆನಾಶಕವನ್ನು ಕುಡಿದಿದ್ದಾರೆ. ತಕ್ಷಣ ಆಕೆಯನ್ನು ಆಯನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆಗೆ ಪೂರಕ ವ್ಯವಸ್ಥೆ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿಯೂ ಸಹ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೂರು ದಿನಗಳ ನಂತರ ಸಾವನ್ನಪ್ಪಿದ್ದಾರೆ. ಈ ಸಾವಿನಿಂದ ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.
ಆನ್ಲೈನ್ ಕ್ಲಾಸ್ ಆರಂಭವಾದಗಿಂದ ಮಕ್ಕಳಿಗೆ ಮೊಬೈಲ್ ಮೇಲೆ ಆಸಕ್ತಿ ಹೆಚ್ಚಾಗಿದೆ
ಈ ಕುರಿತು ಮೃತ ಯುವತಿಯ ಮಾವ ಮಾತನಾಡಿ ಮೊಬೈಲ್ ನೋಡಬೇಡ ಎಂದು ಹೇಳಿದ್ದಕ್ಕೆ ಯವತಿ ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವೆಲ್ಲರೂ ಸಹ ಆಕೆಯನ್ನು ಬಹಳಾ ಪ್ರೀತಿಯಿಂದ ಸಾಕಿದ್ದೆವು. ಯಾರೇ ಮಾಕ್ಕಳಾಗಲಿ ನಿಮಗೆ ಯೋಚಿಸುವ ಶಕ್ತಿ ಇದೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದರು. ಹಾಗೆಯೇ ಈ ಹಿಂದೆ ಆನ್ಲೈನ್ ಕ್ಲಾಸ್ ಜಾರಿಗೆ ತಂದಾಗಿನಿಂದ ಇಂತಹ ಘಟನೆಗಳು ಹೆಚ್ಚಾಗಿದೆ. ಮಕ್ಕಳು ಮೊಬೈಲ್‌ನಲ್ಲಿ ಏನು ಮಾಡುತ್ತಿರುತ್ತಾರೆ ಎಂಬುದರ ಬಗ್ಗೆ ನಮಗೆ ತಿಳಿಯುವುದಿಲ್ಲ. ಏನಾದರೂ ಕೇಳಿದ್ರೆ ಓದುತ್ತಿದ್ದೇವೆ ಎಂದು ಹೇಳ್ತಾರೆ ಹಾಗಾಗಿ ಪೋಷಕರು ಇದರಿಂದ ಸುಮ್ಮನಾಗ್ತಾರೆ. ಅಂದಿನಿಂದ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್‌ಗಿದ್ದಾರೆ. ದಯವಿಟ್ಟು ಯಾರೇ ಮಕ್ಕಳಾಗಲಿ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದರು
SUMMARY | The girl got upset and drank the herbicide she had brought to the garden to spray.
KEYWORDS | mobile, suicide, crime news, kannadanews.