SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 25, 2025
ಶಿವಮೊಗ್ಗ| ಕೇಂದ್ರ ಸರ್ಕಾರ ರಾಜ್ಯದ ನಬಾರ್ಡ್ ಬ್ಯಾಂಕಿಗೆ ಕೊಡಬೇಕಾದ ಸಾಲದ ಅನುದಾನವನ್ನು ಕಡಿತಗೊಳಿಸಿರುವುದು ಸೇರಿದಂತೆ ಸರ್ಕಾರದಿಂದ ರೈತರಿಗೆ ಆಗುತ್ತಿರುವ ಇನ್ನಿತರೇ ಅನ್ಯಾಯಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರಿ ಯುನಿಯನ್ ವತಿಯಿಂದ ಜನವರಿ 29 ರಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಡಿ ವಸಂತ್ ಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರಿ ಯುನಿಯನ್ ವತಿಯಿಂದ ಜಂಟಿ ಪ್ರತಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಉದ್ದೇಶಗಳಿಗಾಗಿಯೇ 1982 ರಲ್ಲಿ ನಬಾರ್ಡ ಬ್ಯಾಂಕನ್ನು ಸ್ಥಾಪಿಸಲಾಗಿದೆ. ಕೃಷಿಕರಿಗೆ ಕೃಷಿ ಅಭಿವೃದ್ದಿಗಾಗಿ ವಾಣಿಜ್ಯ ಬ್ಯಾಂಕುಗಳು ಸಾಲ ನೀಡದೆ ಇದ್ದಂತ ಸ್ಥಿತಿಯಲ್ಲಿ ಬೆಳೆ ಸಾಲ, ಮಧ್ಯಮಾವಧಿ ಸಾಲ ಹಾಗೂ ದೀರ್ಘಾವಧಿ ಸಾಲಗಳನ್ನು ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯಗಳನ್ನು ಕೊಡುತ್ತ ಬಂದಿರುತ್ತವೆ.
ಆದರೆ ಇಂತಹ ರಾಜ್ಯದ ನವಾರ್ಡ ಬ್ಯಾಂಕಿಗೆ ಈ ಬಾರಿ ಕೇಂದ್ರ ಸರ್ಕಾರವು ಅರ್ಧಕ್ಕಿಂತಲೂ ಹೆಚ್ಚು ಅನುದಾನ / ಸಾಲದ ಹಣವನ್ನು ( ಶೇಕಡ 58%) ಆಂದರೆ 5.600 ಕೋಟಿಯಿಂದ 2340 ಕೋಟಿಗೆ ಕಡಿತಗೊಳಿಸಿದ್ದಾರೆ. ಇದರಿಂದಾಗಿ, ಸ್ಥಳೀಯ ಸಹಕಾರ ಸಂಘಗಳನ್ನು ಮತ್ತು ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳನ್ನು ದುರ್ಬಲಗೊಳಿಸಿ. ಖಾಸಗಿ ಪೈನಾನ್ಸ್ ಸಂಸ್ಥೆಗಳು ಹಾಗೂ ಶ್ರೀಮಂತರ ಬ್ಯಾಂಕ್‌ಗಳನ್ನು ರೈತರು ಅನಿವಾರ್ಯವಾಗಿ ಅವಲಂಜಿಸುವಂತೆ ಮಾಡುವ ಹುನ್ನಾರವಾಗಿದೆ. ಇದರಿಂದ ಕೃಷಿಕರು ಮತ್ತು ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒತ್ತೆಯಿಡುವ ಉದ್ದೇಶ ಇದರ ಹಿಂದೆ ಇದೇ ಎಂದು ದೂರಿದರು.
ಈ ರೈತ ವಿರೋಧಿ ನೀತಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜಿಲ್ಲಾ ಸಹಕಾರಿ ಯೂನಿಯನ್ ಶಿವಮೊಗ್ಗ ಜಿಲ್ಲೆ ಇವರು ಈ ಮೂಲಕ ಜಂಟಿಯಾಗಿ ಖಂಡಿಸುತ್ತೇವೆ. ನಬಾರ್ಡ ಬ್ಯಾಂಕ್ ಉಳಿದರೆ ಮಾತ್ರ ಕೃಷಿ ಕ್ಷೇತ್ರ ಉಳಿಯುತ್ತದೆ. ರಾಜ್ಯದ ರೈತರು ಉಳಿಯುತ್ತೇವೆ ಆದ್ದರಿಂದ ಕೇಂದ್ರ ಸರ್ಕಾರ ನಬಾರ್ಡ ಬ್ಯಾಂಕಿಗೆ ಹೆಚ್ಚಿನ ಅನುದಾನ, ಧನ ಸಹಾಯ ಮಾಡಲು ಒತ್ತಾಯಿಸುತ್ತೇವೆ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಡೆಯೊಡ್ಡಿ
ಖಾಸಗಿ ಮೈಕ್ರೋ ಪೈನಾನ್ಸ್‌ಗಳ ಜನ ಸಾಮಾನ್ಯರಿಗೆ ಬಡವರಿಗೆ ದುಬಾರಿ ಬಡ್ಡಿ ದರದಲ್ಲಿ ಸಾಲ ನೀಡಿ ಅವರ ಜೀವ ಹಿಂಡುತ್ತಿವೆ. ಈ ಫೈನಾನ್ಸ್‌ಗಗಳ ಕಾಟ ತಾಳಲಾರದೆ ನೂರಾರು ಜನರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ವಲಸೆಗೆ ಹೋಗಿದ್ದಾರೆ ಈ ಎಲ್ಲಾ ಅಂಶಗಳಿಗೆ ಕಾರಣವಾಗಿರುವ ಮೈಕ್ರೋ ಪೈನಾನ್ಸ್‌ಗಳ ಕಿರುಕುಳವನ್ನು ತಪ್ಪಿಸಲೇ ಬೇಕಾಗಿದೆ. ಇದಕ್ಕೇ ಕೇಂದ್ರ ರಿಸರ್ವ ಬ್ಯಾಂಕ್ ನಿಯಂತ್ರಣ ತರುವ ಹಣಕಾಸಿನ ನೀತಿಯನ್ನು ತಕ್ಷಣ ಜಾರಿಗೊಳಿಸಬೇಕಾಗಿ ಒತ್ತಾಯಿಸುತ್ತೇವೆ ಎಂದರು.
ಈ ಎಲ್ಲಾ ಅಂಶಗಳಿಂದ ಬೇಸತ್ತು ಬುಧವಾರದಂದು ಬೆಂಗಳೂರಿನ ನೃಪತುಂಗ ರಸ್ತೆಯಲಿರುವ ರಿಸರ್ವ ಬ್ಯಾಂಕ್ ಕಛೇರಿ ಎದುರು ಧರಣಿ ಸತ್ಯಾಗ್ರಹವನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ರೈತರು ಮತ್ತು ಸಹಕಾರಿ ಸಂಘದ ಪ್ರತಿನಿಧಿಗಳು ಹಮ್ಮಿಕೊಂಡಿದ್ದೇವೆ ಎಂದರು.
SUMMARY | The Karnataka Rajya Raitha Sangha and Shivamogga District Co-operative Union will stage a protest in front of the Reserve Bank of India (RBI) office in Bengaluru on January 29 to protest against the injustice meted out to the farmers.
KEYWORDS | Rajya Raitha Sangha, Shivamogga, protest, Reserve Bank, Bengaluru,