SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ಮನೆಯ ಮುಂದೆ ಮೀನು, ಮೊಟ್ಟೆ, ಗೊಂಬೆ ಇತ್ಯಾದಿಗಳನ್ನ ಬಳಸಿಕೊಂಡು ವಾಮಾಚಾರ ಮಾಡಿಸಿರುವ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಅಂತರಗಂಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 1 ರಂದು ಅಮಾವಾಸ್ಯೆಯ ದಿನ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಲ್ಲಿನ ನಿವಾಸಿಯೊಬ್ಬರು ಮನೆಯಲ್ಲಿಲ್ಲದ ವೇಳೆ ಅವರ ಮನೆ ಬಾಗಿಲ ಬಳಿಯಲ್ಲಿ ಕೃತ್ಯವೆಸಗಲಾಗಿದೆ. ಕುಂಕುಮ, ಅರಶಿನ ಚೆಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನ ಬಳಸಿ ಕೃತ್ಯವೆಸಗಲಾಗಿದೆ. ಮನೆಯವರನ್ನ ಹೆದರಿಸುವ ನಿಟ್ಟಿನಲ್ಲಿ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದ್ದು, ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
SUMMARY | Black magic was done in front of a house in tnapur village near Antaragange in Bhadravathi taluk
KEY WORDS | Black magic , Ratnapur village , Antaragange in Bhadravathi taluk