SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 21, 2025
ಶಿವಮೊಗ್ಗ : ಶ್ರೀ ಗುರುಕೃಪಾ ಗಾನ ಮಂದಿರ ಮತ್ತು ಕರ್ನಾಟಕ ಸಂಘ (ರಿ) ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಗುರು ಗಾನಯೋಗಿ, ಶಿವಯೋಗಿ ಪದ್ಮಭೂಷಣ ಪಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 111 ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಗುರು ಪರಂಪರಾ ಎಂಬ ಗಾನ ನಮನ ಕಾರ್ಯಕ್ರಮವನ್ನು ಮಾ.23 ರಂದು ಮಧ್ಯಾಹ್ನ 2.00 ಗಂಟೆಗೆ ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಗೀತ ಗುರು ಉಸ್ತಾದ್ ಹುಮಾಯೂನ್ ಹರ್ಲಾಪುರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30 ಕ್ಕೆ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ವೇದಿಕೆಯಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಆನಂದಪುರದ ಪರಮಪೂಜ್ಯ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಹೆಚ್.ಆರ್.ಶಂಕರನಾರಾಯಣ ಶಾಸ್ತ್ರಿ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆಯ ಖ್ಯಾತ ಗಾಯಕರಾದ ಪಂ. ಡಾ. ಮೋಹನ್ ಕುಮಾರ್ ದಾರೇಖರ್ ರವರು 2025 ನೇ ಸಾಲಿನ ಶ್ರೀ ಗುರು ಪುಟ್ಟರಾಜ ಗಾನ ಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ವೇಳೆ ಗುರುಗಳು ಹಾಗೂ ಶಿಷ್ಯರಿಬ್ಬರೂ ಸಂಗೀತವನ್ನು ಹಾಡುತ್ತಾರೆ ಎಂದರು.
SUMMARY | Sri Guru Parampara, a gana namana programme, will be held on Mar. 23 at 2.00 pm at Karnataka Sangha
KEYWORDS | Sri Guru Parampara, gana namana programme, shivamogga,