SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 20, 2025
ಶಿವಮೊಗ್ಗ | ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಪ್ರಜ್ಞಾ ಎಜುಕೇಷನ್ ಟ್ರಸ್ಟ್ ನಿಂದ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ನ್ನು ಪ್ರಾರಂಭಿಸುತ್ತಿದ್ದು, ಈ ಶಾಲೆಯ ಉದ್ಘಾಟನಾ ಸಮಾರಂಭವನ್ನು ಮಾರ್ಚ್ 23ರ ಭಾನುವಾರದಂದು ಸಂಜೆ 5:30ಕ್ಕೆ ಪೇಸ್ ಪಿಯು ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷರಾದ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಲೆಯ ಉದ್ಘಾಟನೆಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮೂಡಬಿದ್ರಿಯ ಪ್ರತಿಷ್ಠಿತ ಆಳ್ವ ಎಜುಕೇಷನ್ ಫೌಂಡೇಷನ್ ಸಂಸ್ಥಾಪಕರಾದ ಡಾ. ಎಂ. ಮೋಹನ್ ಆಳ್ವ ರವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ರವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ಪ್ರೊ. ಹೆಚ್. ಆನಂದ್, ಕಾರ್ಯದರ್ಶಿಗಳಾದ ಪ್ರೊ. ವಿಶ್ವನಾಥಯ್ಯರವರು, ಖಜಾಂಚಿಗಳಾದ ಕೆ.ಈ.ಕಾಂತೇಶ್ರವರು ಮತ್ತು ಶಾಲೆಯ ಪ್ರಾಂಶುಪಾಲರಾದ ಶ್ರೀ. ಎನ್. ಆರ್. ಪವನ್ ಕುಮಾರ್ ರವರು ಉಪಸ್ಥಿತರಿರಲಿದ್ದಾರೆ ಎಂದರು.
ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಕರ್ನಾಟಕ ವೈಭವ’ ಎಂಬ ವಿನೂತನ ನೃತ್ಯರೂಪಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕರ್ನಾಟಕದ ಜನಪ್ರಿಯ ನಟರು ಮತ್ತು ಭರತನಾಟ್ಯ ಕಲಾವಿದರಾದ ಡಾ. ಸಂಜಯ್ ಶಾಂತಾರಾಮ್ ರವರ ನೇತೃತ್ವದ ಶಿವಪ್ರಿಯ ನಾಟ್ಯ ಶಾಲೆಯ ನಲವತ್ತು ಕಲಾವಿದರು ಈ ಮನಮೋಹಕ ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ. ಈ ವಿಶಿಷ್ಟ ನೃತ್ಯರೂಪಕವು ದೇಶ ವಿದೇಶಗಳಲ್ಲಿ ಪ್ರದರ್ಶಿಸಲ್ಪಟ್ಟಿದ್ದು ಅಪಾರ ಜನಮನ್ನಣೆಯನ್ನು ಪಡೆದಿರುತ್ತದೆ. ಹಾಗಾಗಿ ಶಿವಮೊಗ್ಗದ ಜನತೆ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶೇಷ ಕಾರ್ಯಕ್ರಮ ಮೆರುಗು ಹೆಚ್ಚಿಸಬೇಕೆಂದು ಮೂಲಕ ಕೋರಲಾಗಿದೆ.. ಎಲ್ಲರಿಗೂ ನೆರವಾಗುವಂತೆ ಸೂಕ್ತ ಬಸ್ ವ್ಯವಸ್ಥೆ ಮತ್ತು ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಶಾಲೆಯು 2025-26ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭವಾಗಲಿದ್ದು, ನರ್ಸರಿಯಿಂದ ಎಂಟನೇ ತರಗತಿಯವರೆಗೆ ದಾಖಲಾತಿಯನ್ನು ಪ್ರಾರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ಸೂಕ್ತ ಅನುಮತಿಯನ್ನು ಪಡೆಯಲಾಗಿದೆ. ಶಾಲೆಯ ಶಿಕ್ಷಕರ ನೇಮಕಾತಿ ಈಗಾಗಲೇ ಪೂರ್ಣಗೊಂಡಿದ್ದು, ಅತ್ಯಂತ ನುರಿತ ಮತ್ತು ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶಾಲೆ ನಡೆಸಲು ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು
ಶಾಲೆಯಲ್ಲಿ ಮಕ್ಕಳಿಗೆ ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸರ್ವಾಂಗೀಣ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನ್ವಯ ಸಾಮರ್ಥ್ಯಾಧಾರಿತ ಮತು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಶಾಲೆಯಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು. ಮಕ್ಕಳ ಬೌದ್ಧಿಕ ಬುದ್ಧಿಮತ್ತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಲಿಂಪಿಯಾಡ್ ಪರೀಕ್ಷೆಗಳು, ಕೋಡಿಂಗ್ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಹಂತಗಳಲ್ಲಿ ತರಬೇತಿ, ಪಠ್ಯದ ಪರಿಣಾಮಕಾರಿ ಕಲಿಕೆಗಾಗಿ ಪ್ರತಿಷ್ಠಿತ ಕ್ರಿಸಾಲಿಸ್ ಸಂಸ್ಥೆಯೊಂದಿಗೆ ಸಹಯೋಗ, ಸೈಟ್ಸ್ & ಗೈಡ್ಸ್ ತರಬೇತಿ, ಅಬಾಕಸ್, ಚೆಸ್ ತರಬೇತಿ, ಸಹಪಠ್ಯ ಚಟುವಟಿಕೆಗಳು, ಆಟೋಟ ಸ್ಪರ್ಧೆಗಳು, ದೇಶೀ ಆಟಗಳಿಗೆ ಹೆಚ್ಚಿನ ಪ್ರಾಧಾನ್ಯತೆ, ಸಮಾಜಮುಖಿ ಕಾರ್ಯಕ್ರಮಗಳು; ಭಾರತದ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಯೋಗ, ಭಗವದ್ಗೀತೆ, ಭಜನೆ, ಸಂಸ್ಕೃತ ತರಗತಿಗಳನ್ನು ಆಯೋಜಿಸಲಾಗುವುದು. ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿಶೇಷವಾದ ಒಳಾಂಗಣ ಚಟುವಟಿಕೆ ಮತ್ತು ಆಟದ ಕೊಠಡಿಯನ್ನು ನಿರ್ಮಿಸಲಾಗಿದೆ. ಹೀಗೆ ಹಲವಾರು ಚಟುವಟಿಕೆಗಳ ಆಯೋಜನೆಯ ಮೂಲಕ ಕಲಿಕೆಯನ್ನು ಆನಂದಮಯಗೊಳಿಸಿ ಮಕ್ಕಳಲ್ಲಿ ಶಿಸ್ತು ಸಂಯಮ ಬೆಳೆಸಿ ಭವಿಷ್ಯಕ್ಕೆ ಅಣಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
SUMMARY | The inauguration ceremony of the school will be held on Sunday, March 23 at 5.30 pm at the Pace PU College premises, according to Trust President K S Eshwarappa.
KEYWORDS | inauguration ceremony, Pace international school, shivamogga, k s eshwarappa,