ಮಾರ್ಚ್‌ 22, ಶಿವಮೊಗ್ಗದಲ್ಲಿ ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 21, 2025

ಶಿವಮೊಗ್ಗ |  ಗಾರಾ ಫೌಂಡೇಶನ್, ಕ್ರಿಯೇಟಿವ್ ಗ್ರೂಪ್ ಹಾಗೂ ಭೂಮಿ ಸಂಸ್ಥೆಯ ಸಹಯೋಗದಲ್ಲಿ ಮಾ.22 ರಂದು ‘ರಂಗ ಚಿತ್ತಾರ’ ಎನ್ನುವ ರಂಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದು ‘ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ’ ನಾಟಕ ಪ್ರದರ್ಶನವನ್ನು ನಗರದ ಸುವರ್ಣ ಸಾಂಸ್ಕೃತಿಕ  ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ರಿಯೇಟಿವ್ ಗ್ರೂಪ್ ಸಂಸ್ಥಾಪಕ ಪರಮೇಶ್ವರ್ ಹೇಳಿದರು. 

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಅಂದು ಸಂಜೆ 5.30 ರಿಂದ 9.00 ಗಂಟೆಯವರೆಗೆ ‘ರಂಗ ಚಿತ್ತಾರ’ ನಡೆಯಲಿದ್ದು, ಈಗಾಗಲೇ ಯಶಸ್ವಿ ಪ್ರದರ್ಶನ ಮಾಡಿರುವ ಹಾಗೂ ಜನ ಮೆಚ್ಚುಗೆ ಗಳಿಸಿರುವ ‘ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚನ್ನಮ್ಮ’ ನಾಟಕದಲ್ಲಿ ಬರುವ ಕೆಳದಿ ರಾಣಿ ಚೆನ್ನಮ್ಮ ಪಾತ್ರವನ್ನು ಬಹುಮುಖ ಪ್ರತಿಭೆ ಲಕ್ಷ್ಮೀಯವರು ನಿರ್ವಹಿಸಲಿದ್ದಾರೆ. ರಂಗಕರ್ಮಿ ಗಣೇಶ್ ಕೆಂಚಾನಲ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಐತಿಹಾಸಿಕ ನಾಟಕ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದರು.

ಭೂಮಿ ಸಂಸ್ಥೆಯ ನವೀನ್ ತಲ್ಲಾರಿ ಮಾತನಾಡಿ, ಇದೊಂದು ರಂಗಕರ್ಮಿಗಳ ಉತ್ತೇಜನಕ್ಕಾಗಿ ಆಯೋಜಿಸಲಾಗಿದ್ದು, ರಂಗಗೀತೆ, ಹತ್ತು ಜನ ಕಲಾವಿದರಿಗೆ ಮಲೆನಾಡು ಕಲಾ ಕೌಸ್ತುಭ ಪ್ರಶಸ್ತಿ ಮತ್ತು ಗೌರವ ಸನ್ಮಾನ ಇರುತ್ತದೆ. ಇದೇ ತಿಂಗಳು ಬಿಡುಗಡೆಯಾಗಲಿರುವ ‘ದಾಸರಹಳ್ಳಿ’ ಕನ್ನಡ ಚಲನಚಿತ್ರದ ಪೋಸ್ಟರ್‌  ಬಿಡುಗಡೆಗೊಳಿಸಿ, ಸಿನಿಮಾ ಯಶಸ್ವಿ ಪ್ರದರ್ಶನಕ್ಕೆ ಹಾರೈಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ನಾಟಕದ ವೀಕ್ಷಣೆಗೆ ಬರುವ ಕಲಾಸಕ್ತರಿಗೆ, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ. ಮುಕ್ತವಾಗಿ ಬಂದು ರಂಗ ಚಿತ್ತಾರದಲ್ಲಿ ಭಾಗವಹಿಸಲು ಕೋರಿದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ನೆರವೇಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾಲಿಬಾಲ್ ಅಸೋಸಿಯೇಷನ್ ಕೆ.ಎಸ್.ಶಶಿ, ಶಿವಮೊಗ್ಗ ಪುಟ್ಬಾಲ್ ಸಂಸ್ಥೆ ಅಧ್ಯಕ್ಷರು ಹಾಗೂ ದಾಸರಹಳ್ಳಿ ಚಲನಚಿತ್ರದ ಸಹ ನಿರ್ಮಾಪಕರಾದ ಎಸ್.ಆರ್.ಶ್ರೀನಾಥ್, ವಕೀಲರಾದ ಗೀತಾ ಮಾನೆ, ಸಮಾಜ ಸೇವಕರಾದ ಚಿರಂಜೀವಿ ಬಾಬು, ಕಂಪ್ಯೂಟರ್ ಹೌಸ್ ಮಾಲೀಕರಾದ ವಿನೋದ್ ಇವರುಗಳು ಉಪಸ್ಥಿತರಿರಲಿದ್ದಾರೆ ಎಂದರು.

SUMMARY | The play ‘Dakshinadheeswari Keladi Rani Chennamma’ will be staged at Suvarna Samskruti Bhavan in the city 

KEYWORDS | Dakshinadheeswari Keladi Rani Chennamma, drama, shivamogga, 

Share This Article