ಮಾರ್ಚ್‌ 15 ಹೋಳಿ ಹಬ್ಬ | ಶಿವಮೊಗ್ಗದಲ್ಲಿ ಅದ್ದೂರಿ ಆಚರಣೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 13, 2025

ಶಿವಮೊಗ್ಗ | ಪ್ರತಿ ವರ್ಷದಂತೆ ಈ ಬಾರಿಯೂ ಸಹ ಶಿವಮೊಗ್ಗದಲ್ಲಿ ಅದ್ದೂರಿ  ಹೋಳಿ ಹಬ್ಬದ ಆಚರಣೆಗೆ ಸಿದ್ದತೆಯನ್ನು ನಡೆಸಲಾಗಿದೆ.

ಮಾರ್ಚ್‌ 15 ರಂದು ಹಿಂದೂ ಅಲಂಕಾರ ಸಮಿತಿ ವತಿಯಿಂದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಹೋಳಿ ಹಬ್ಬದ ಆಚರಣೆಗೆ ಭರ್ಜರಿ ಸಿದ್ದತೆ ನಡೆಸಲಾಗಿದೆ. ಈ ವೇಳೆ ರೈನ್‌ ಡ್ಯಾನ್ಸ್‌ನ್ನು ಕೂಡಾ ಆಯೋಜನೆ ಮಾಡಲಾಗಿದ್ದು ಈಸಂದರ್ಭದಲ್ಲಿ ಸಾವಿರಾರು ಯುವಕ ಯುವತಿಯರು ಸೇರುವ ನಿರೀಕ್ಷೆ ಇದೆ.

ಅಷ್ಟೇ ಅಲ್ಲದೆ ಶಿವಮೊಗ್ಗ ಕುಂಬಾರ ಬೀದಿ ಕುಂಬಾರ ಸಮಾಜದ ವತಿಯಿಂದ ರತಿ-ಮನ್ಮಥೋತ್ಸವ ಹಬ್ಬವನ್ನು ಆಯೋಜಿಸಿದೆ.  ಬುಧುವಾರ ಸಂಜೆ ರತಿ-ಮನ್ಮಥರ ಮೂರ್ತಿಯನ್ನು ಪ್ರತಿಷ್ಠಾಪನೆ  ಮಾಡಲಾಗಿದೆ. ಹಾಗೆಯೇ ಶನಿವಾರದಂದು ಈ ಎಲ್ಲಾ ಮೂರ್ತಿಗಳ ಕಾಮದಹನ ನಡೆಯಲಿದೆ.

SUMMARY | Like every year, this time too, preparations have been made for a grand Holi festival in Shivamogga.

KEYWORDS | Holi festival, Shivamogga,

Share This Article