SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 27, 2025
ಶಿವಮೊಗ್ಗ | ನವ ಕರ್ನಾಟಕ ನಿರ್ಮಾಣ ಆಂದೋಲನ ಶಿವಮೊಗ್ಗ, ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಮಹಿಳಾ ಚಳುವಳಿ, ವಿದ್ಯಾರ್ಥಿ – ಯುವಜನರ ಚಳುವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವನ್ನು ಜನರ ನಡುವೆ ಜನತಾ ಪ್ರಣಾಳಿಕೆ ಬಿಡುಗಡೆ ಮತ್ತು ಚರ್ಚೆಯನ್ನು ಮಾ.2 ರಂದು ಬೆಳಗ್ಗೆ 10.30 ಕ್ಕೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ರೈತ ಮತ್ತು ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಮಂಜುನಾಥ ಗೌಡ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಉಚಿತ ವಿದ್ಯುತ್ ನ್ನು ರೈತಾಪಿ ವಲಯಕ್ಕೆ ಕೊಡುವುದು ಸೇರಿದಂತೆ ಇತರೆ ಅಂಶಗಳನ್ನು ಒಳಗೊಂಡಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ನೀಡಿದ ಸಲಹೆಗಳನ್ನು ಆಲಿಸಿ, ಕಾರ್ಯಕರ್ತರುಗಳು ಮುಂದಿಡುವ ಆಭಿಪ್ರಾಯಗಳನ್ನು ಮುಖಾಮುಖಿಯಾಗಿ ಚರ್ಚಿಸಲು ಎಲ್ಲಾ ರಾಜ್ಯ ನಾಯಕರುಗಳು ಆಗಮಿಸಲಿದ್ದಾರೆ. ಕರ್ನಾಟಕ ಚರಿತ್ರೆಯಲ್ಲಿ ಮೊದಲ ಬಾರಿಗೆ ಎಲ್ಲಾ ಜನರ ನಡುವೆ ಚರ್ಚಿಸಿ, ರೂಪಿಸಲ್ಪಟ್ಟು, ಜನರಿಂದಲೇ ಹುಟ್ಟಿಬಂದ ಈ ಜನತಾ ಪ್ರಣಾಳಿಕೆಯನ್ನು ಬೃಹತ್ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಜನತಾ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲು ರಾಜಕೀಯ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದರು.
SUMMARY | On Mar. 2 at 10.30 am, Dr. Manjunatha Gowda, state honorary president of Rytha and Hasiru Sena, said the event was organised at B R Ambedkar Bhavan.
KEYWORDS | Manjunatha Gowda, Ambedkar Bhavan, Rytha and Hasiru Sena,