SHIVAMOGGA | MALENADUTODAY NEWS | ಮಲೆನಾಡು ಟುಡೆ |
ಮೆಲೋಡಿ ಕಿಂಗ್ ಸೋನು ನಿಗಮ್ ಹಾಗೂ ಮೈಕ್ ಟೈಸನ್ ಎಂದೇ ಖ್ಯಾತಿ ಯಾಗಿರುವ ಸಂಚಿತ ಹೆಗ್ಡೆ ಸೇರಿ ಹಾಡಿರುವ ಮಾಯಾವಿ ಹಾಡು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ.
ವಿಭಿನ್ನ ಧ್ವನಿ ಮೂಲಕ ಹಾಡು ಹಾಡುವ ಸಂಚಿತ್ ಹೆಗ್ಡೆ ಹಾಗೂ ಮೆಲೋಡಿ ಕಿಂಗ್ ಸೋನು ನಿಗಮ್ ಈ ಇಬ್ಬರು ಯಾವುದೇ ಹಾಡು ಹಾಡಿದರು ಆ ಹಾಡು ಸೂಪರ್ ಹಿಟ್ ಆಗೂದಂತೂ ಪಕ್ಕಾ.
ಕೆಲವೊಮ್ಮೆ ಸಂಗೀತ ಪ್ರಿಯರು ಈ ಇಬ್ಬರ ಜೋಡಿಯಲ್ಲಿ ಅಲ್ಲಿ ಒಂದು ಹಾಡು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಾರೆ. ಅದೀಗ ಸತ್ಯವಾಗಿದೆ.
ಸಂಚಿತ್ ಹೆಗ್ಡೆ ಸ್ವತಃ ಕಂಪೋಸ್ ಮಾಡಿ ಸೋನು ನಿಗಮ್ ಹಾಗೂ ಸಂಚಿತ ಹೆಗ್ಡೆ ಇಬ್ಬರು ಮಾಯಾವಿ ಎಂಬ ಅಲ್ಬಮ್ ಸಾಂಗ್‌ವೊಂದನ್ನ ಹಾಡಿದ್ದಾರೆ.
ಈ ಮೆಲೋಡಿ ಸಾಂಗ್ ಅತ್ಯುತ್ತಮ ವಾಗಿ ಮೂಡಿ ಬಂದಿದ್ದು, ಯೂಟ್ಯೂಬ್ ನಲ್ಲಿ ಸಧ್ಯ 1 ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಈ ಹಾಡು ಸದ್ಯ ಇನ್ಸ್ಟಾಗ್ರಂನಲ್ಲಿ ಟ್ರೆಂಡಿಂಗ್ ನಲ್ಲಿದೆ.