SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 11, 2025
ಚಿಕ್ಕಮಗಳೂರು | ಮಾರ್ಚ್ 10 ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕಪ್ಪತ್ ಗಿರಿಯ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಡೆಮ್ಮೆಯೊಂದು ದಾಳಿ ನಡೆಸಿದೆ. ಈ ಹಿನ್ನಲೆ ಗಾಯಗೊಂಡ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
58 ವರ್ಷದ ವಸಂತ ಎಂಬ ಮಹಿಳೆ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆವೇಳೆ ತೋಟದಲ್ಲಿ ಕಾಡೆಮ್ಮೆಯೊಂದು ಪ್ರತ್ಯಕ್ಷವಾಗಿದ್ದು, ಮಹಿಳೆಯನ್ನು ಅಟ್ಟಿಸಿಕೊಂಡು ಬಂದಿದೆ. ಇದರಿಂದಾಗಿ ಜೀವ ಉಳಿಸಿಕೊಳ್ಳುಲು ಮಹಿಳೆ ಓಡಲು ಆರಂಭಿಸಿದ್ದಾರೆ. ಓಡುತ್ತಿರುವಾಗ ಕಾಲುಜಾರಿ ಮಹಿಳೆ ಕೆಳಗೆ ಬಿದ್ದಿದ್ದು, ಮಹಿಳೆಗೆ ಕಾಡೆಮ್ಮೆ ಕೊಂಬಿನಿಂದ ತಿವಿದಿದೆ. ಇದರಿಂದಾಗಿ ವಸಂತರವರ ಗಲ್ಲಕ್ಕೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಈಗ ವಸಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಡು ಕೋಣ ಹಾಗೂ ಕಾಡೆಮ್ಮೆ ಹಾವಳಿ ಹೆಚ್ಚಾಗಿದ್ದು, ಈ ಹಿಂದೆ ಅದರ ದಾಳಿಯಿಂದಾಗಿ ಅನೇಕರು ಮೃತಪಟ್ಟಿದ್ದಾರೆ, ಇದರಿಂದಾಗಿ ಮನುಷ್ಯರು ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,
SUMMARY | A woman working in a coffee estate was attacked by a bison
KEYWORDS | coffee estate, bison, attack, chikkamagaluru,