SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024
ಶಿವಮೊಗ್ಗ | ಬಿಜೆಪಿ ಹಾಗೂ RSS ವಿಷಕಾರಿ ಹಾವುಗಳು ಹಾವನ್ನು ಕಂಡಲ್ಲಿ ಕೊಲ್ಲಿ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ನನ್ನ ಮೇಲೆ ಸುಮೊಟೋ ಕೇಸ್ ದಾಖಲಿಸಿದಂತೆ ಅವರ ಮೇಲೂ ಸುಮೊಟೊ ಕೇಸ್ ದಾಖಲಿಸಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ಹಾಗೂ RSS ವಿಷಕಾರಿ ಹಾವುಗಳು. ಹಾವುಗಳನ್ನು ಕಂಡಲ್ಲಿ ಕೊಲ್ಲಿ ಎಂಬಂತಹ ಹೇಳಿಕೆಯನ್ನು ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯವರೆ ನಿಮ್ಮಂತಹ ಹಿರಿಯ ರಾಜಕಾರಣಿಗಳಿಂದ ಇಂತಹ ಮಾತಗಳು ಬರುತ್ತಿದೆ. ಇಂದು RSS ಇಲ್ಲದಿದ್ದರೆ ಈ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಊಹೆ ಮಾಡಲು ಸಹ ಸಾಧ್ಯವಿಲ್ಲ. ನಿಮ್ಮ ಬಾಯಿಂದ ಇಂತಹ ಮಾತು ಬಂದಿದ್ದು ಆಶ್ಚರ್ಯ. ಆಗಿನ ಕಾಲದಲ್ಲಿ ನೆಹರೂ ಇಂದಿರಾಗಾಂಧಿಗೂ ಸಹ RSS ಅನ್ನು ಬ್ಯಾನ್ ಮಾಡಲು ಸಾದ್ಯವಾಗಲಿಲ್ಲ, ಇನ್ನು ನಿಮ್ಮಿಂದ ಹೇಗೆ ಸಾಧ್ಯವಾಗುತ್ತದೆ. ನಾನೂ ಈ ಹಿಂದೆ ಕಾಂಗ್ರೆಸಿಗರನ್ನು ಕಂಡಲ್ಲಿ ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದು ಹೇಳಿದ್ದೆ, ಹಾಗಾಗಿ ನನ್ನಮೇಲೆ ಸುಮೊಟೊ ಕೇಸ್ ಹಾಕಿದ್ದರು. ಆದರೆ ನೀವು ಬಿಜೆಪಿ ಹಾಗೂ RSs ವಿಷಕಾರಿ ಹಾವುಗಳು ಹಾವನ್ನು ಕಂಡಲ್ಲಿ ಕೊಲ್ಲಿ ಎಂದು ಹೇಳಿದ್ದೀರಿ. ಹಾಗಾಗಿ ಈ ವಿಷಯದಲ್ಲಿ ನಿಮ್ಮ ಮೇಲೂ ಸುಮೊಟೊ ಕೇಸ್ ಹಾಕಬೇಕು ಎಂದರು.
ಖರ್ಗೆಯವರು ಉದ್ವೇಗದಲ್ಲಿ ಹೇಳಿದ್ದರೆ ಆ ಮಾತು ಬೇರೆ. ಆದರೆ ಉದ್ದೇಶಪೂರ್ವಕವಾಗಿ ಹೇಳಿದ್ದರೆ, ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
SUMMARY| Former Deputy CM Eshwarappa demanded that a suo motu case should be registered against mallikharjun kharge
KEYWORDS| suo motu case, Eshwarappa, mallikharjun kharge,