SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 19, 2024
ಶಿವಮೊಗ್ಗ | ಮರ್ಕಝ್ ಸಆದಃ ಧಾರ್ಮಿಕ ಲೌಕಿಕ ಸಮನ್ವಯ ವಿಧ್ಯಾಭ್ಯಾಸ ಸಂಸ್ಥೆ, ವತಿಯಿಂದ ಡಿ.19 ರಿಂದ 22 ರವರಿಗೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಶಿವಮೊಗ್ಗದ ವಾದಿ ವಿ ಹುದಾ 2ನೇ ಮುಖ್ಯ ರಸ್ತೆ 5ನೇ ತಿರುವಿನಲ್ಲಿ ಇರುವ ವಿದ್ಯಾಸಂಸ್ಥೆಆವರಣದಲ್ಲಿ ನಡೆಯಲಿದೆ. ಈ ಕುರಿತು ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ಲತೀಫ್ ಸಅದಿ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಮರ್ಕಝ್ ಸಆದಃ ಧಾರ್ಮಿಕ ಲೌಕಿಕ ಸಮನ್ವಯ ವಿಧ್ಯಾಭ್ಯಾಸ ಸಂಸ್ಥೆ ಪ್ರಾರಂಭವಾಗಿ 08 ವರ್ಷ ಕಳೆದಿದೆ. ನಮ್ಮ ವಿಧ್ಯಾಭ್ಯಾಸ ಸಂಸ್ಥೆಯ ಮುಖ್ಯ ಗುರಿ ವಿದ್ಯಾರ್ಥಿಗಳಿಗೆ ಲೌಕಿಕ ವಿಧ್ಯಾಭ್ಯಾಸದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡಿ ಭಾರತ ದೇಶದ ಹಿತವನ್ನು ಭಯಸುವ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ಆಗಿದೆ ಎಂದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಇಂದು ಸಂಜೆ 6:30 ರಿಂದ ಪ್ರಾರಂಭ ವಾಗಲಿದ್ದು, ಇದೇ ಡಿಸೆಂಬರ್ 22 ರ ವರೆಗೆ 3 ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನೂರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಅದನ್ನು ತುಂಗಾ ಭದ್ರ ಎಂಬ ಹೆಸರಿನ ಎರಡು ತಂಡಗಳಾಗಿ ಮಾಡುತ್ತಿದ್ದೇವೆ. ಹಾಗೆಯೇ ಈ ಕಾರ್ಯಕ್ರಮ 6 ಭಾಷೆಯಲ್ಲಿ ನಡೆಸಲಾಗುತ್ತದೆ ಎಂದರು.
ಈ ಕಾರ್ಯಕ್ರಮದ ಭಾಗವಾಗಿ ಅಂದು ಮಾದಕ ದ್ರವ್ಯ ವಸ್ತುಗಳ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಸಂಸ್ಥೆಯ ವಿದ್ಯಾರ್ಥಿಗಳು ಚಾಲನೆ ನೀಡಲಿದ್ದಾರೆ. ಮುಂಬರುವ ದಿನಗಳಲ್ಲಿ ನಗರದ ಎಲ್ಲಾ ಗಲ್ಲಿ ಗಲ್ಲಿಗಳಲ್ಲೂ ಮಾದಕ ದ್ರವ್ಯ ವಸ್ತುಗಳ ವಿರುದ್ಧ ಜನ ಜಾಗೃತಿ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಿದ್ದೇವೆ ಎಂದರು.
ಡಿಸೆಂಬರ್ 22 ರಂದು ಸಆದಃ ಕಾನ್ಸರೆನ್ಸ್ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಪ್ರತೀ ವರ್ಷ ಸಂಸ್ಥೆಯು ನೀಡುವ ಪ್ರಖ್ಯಾತ ಉದ್ಯಮಿ ಹಾಜಿ ಇಟ್ಬಾಲ್ ಹಬೀಬ್ ಸೇಟ್ ರವರ ತಂದೆ ಮಹೂಂ೯ ಹಬೀಬ್ ದಾದ ಸೇಠ್ ರವರ ಸ್ಮರಣಾರ್ಥ ಸಆದಃ ಎಕ್ಸಲ್ಲೆಸ್ಲಿ ಅವಾರ್ಡ್‌ನ್ನು ನೀಡುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಈ ಅವಾರ್ಡ್‌ನ್ನು ನೀಡುತ್ತಿದ್ದೇವೆ ಈ ಬಾರಿ ಈ ಅವಾರ್ಡ್‌ನ್ನು ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣ ಪರಿಕಲ್ಪನೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಝನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ರವರಿಗೆ ಪ್ರಧಾನ ಮಾಡಲಿದ್ದೇವೆ ಎಂದರು.
ಅಂದು ಸುಮಾರು 1ಕೋಟಿ ವೆಚ್ಚದಲ್ಲಿ ನಿರ್ಮಾಣವಾದಂತಹ ವಿದ್ಯಾಸಂಸ್ಥೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಕಟ್ಟಡದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ರವರು ಮಾಡಲಿದ್ದಾರೆ. ರಾಜಕೀಯ ಮುಖಂಡರುಗಳಾದ ಶ್ರೀಕಾಂತ್, ಆಯನೂರು ಮಂಜುನಾಥ್ ಸೇರಿದಂತೆ ಪ್ರಮುಖರ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
SUMMARY | Markaz Saadah Religious Secular Samanvaya Vidyabhyasa Sanstha will organise a cultural programme for students from Dec. 19 to 22 at the premises of the educational institution, Wadi V Huda 2nd Main Road, Shivamogga.
KEYWORDS | Markaz Saadah, cultural programme, Shivamogga,