SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 4, 2025
ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡಾ 20 ರಷ್ಟು ಲಾಭ ನೀಡಿ, ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಿ ಎಂಬುದನ್ನು ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಶಿವಮೊಗ್ಗ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಶಿಯೇಶನ್ ವತಿಯಿಂದ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಶಿಯೇಶನ್ ಬೇಡಿಕೆಗಳೇನು
- ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡ 20 ಲಾಭಾಂಶ ನೀಡಬೇಕು
- ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು
- ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಲಾರರು, ಕಾರಣ ಇತ್ತೀಚೆಗಿನ ವರ್ಷಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳವಾಗಿರುವುದು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ವೃದ್ದಿಯಾಗಿಲ್ಲ
- ಕೆಲವೊಂದು ಸನ್ನದುಗಳನ್ನು ಏಲಂ ಮಾಡುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದು 2023 ರ ಸೆಪ್ಟಂಬರ್‌ನಲ್ಲಿ ಇಲಾಖೆ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯಲ್ಲು ಕೂಡಾ ಇದೆ. ದಯವಿಟ್ಟು ಯಾವುದೇ ಕಾರಣಕ್ಕೂ ಸನ್ನದುಗಳನ್ನು ಏಲಂ ಮಾಡಬಾರದು
- ಸಿ ಎಲ್ 2 ಗಳಲ್ಲಿ ಪಾನೀಕರಿಗೆ ಮಧ್ಯ ಸೇವಿಸಲು ಅವಕಾಶ ಕೋರಿ ಮನವಿ. ಸಿ ಎಲ್ 9. ಸಿ ಎಲ್ 7 ಅಥವಾ ಇನ್ನಿತರ ದೊಡ್ಡ ಹೋಟೆಲ್ ಗಳಿಗೆ ಹೋಗಿ ಮಧ್ಯದೊಂದಿಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ದುಬಾರಿ ಖರ್ಚು ಮಾಡಲು ಸಾಧ್ಯವಿಲ್ಲದ ಬಡ ವರ್ಗದ ಗ್ರಾಹಕರಿಗೆ ಅನುಕೂಲವಾಗಲು ನನ್ನದು ಷರತ್ತನ್ನು ಸಡಿಲಿಸುವುದು ಅತೀ ಅಗತ್ಯವಿದೆ. ನನ್ನದು ಅವರಣದಲ್ಲಿ bad braai (Packed Snacks) ಮಾಡಿಕೊಡುವುದರಿಂದ ಬಡ ವರ್ಗದ ಗ್ರಾಹಕರಿಗೆ ಸಹಾಯವಾಗುತ್ತದೆ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡುವುದನ್ನು ತಡೆಗಟ್ಟುವ ಸಾಧ್ಯತೆ ಇರುತ್ತದೆ ಹಾಗೂ ಕಾಯ್ದೆ ಉಲ್ಲಂಘನೆ ತಡೆಯಬಹುದು. ನೆರೆ ರಾಜ್ಯದಲ್ಲಿ ಈ ತೆರನಾದ ವ್ಯವಸ್ಥೆ ಇರುತ್ತದೆ ಹಾಗೂ ಹೆಚ್ಚುವರಿ ಶುಲ್ಕವನ್ನು ಅಳವಡಿಸುವುದರಿಂದ ಸರ್ಕಾರಕ್ಕೆ ವರಮಾನ ಜಾಸ್ತಿ ಆಗುತ್ತದೆ. ನಿಗದಿತ ಸ್ಥಳಾವಕಾಶದಲ್ಲಿ ಆಹಾರ ತಯಾರಿಕೆಗೆ ಅವಕಾಶ ನೀಡದೆ ಮಧ್ಯವನ್ನು ಮಾತ್ರ ನಿಂತು ಕುಡಿಯಲು ಅವಕಾಶವನ್ನು ನೀಡುವಂತೆ ವಿನಂತಿಸುತ್ತಿದ್ದೇವೆ. ಕಾನೂನು ಬಾಹಿರವಾಗಿ ವ್ಯವಹರಿಸದಂತ ಕಠಿಣ ಕಾನೂನು ರೂಪಿಸಬೇಕು. ಈ ವ್ಯವಸ್ಥೆ ಬಯಸುವ ನನ್ನದುದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಸರ್ಕಾರದ ಪರಮಾನದ ಹೆಚ್ಚಳಕ್ಕೆ ಸಹಾಯವಾಗುತ್ತದೆ.
- ಪಿ.ಎಲ್ ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟರ್‌ಗಳನ್ನು ಶುಲ್ಕ ವಿಧಿಸಿ ನೀಡುವ ಕುರಿತು. ಮಂಜೂರಾದ ನನ್ನದು ಅವರಣದಲ್ಲಿ ಮೊದಲನೇ ಮಹಡಿ ಇದ್ದಲ್ಲಿ ಇದು ತುಂಬಾ ಸಹಕಾರಿ ಆಗುತ್ತದೆ, ಮತ್ತು ಹೆಚ್ಚುವರಿ ಶುಲ್ಕ ವಿರಿಸಬಹುದು. CLg ಗಳಲ್ಲಿ ಮದ್ಯವನ್ನು ಪಾರ್ಸೆಲ್ ರೂಪದಲ್ಲಿ ಮಾರಾಟ ಮಾಡುವ ಕುರಿತು ಕಾನೂನು ತಿದ್ದುಪಡಿ ಮಾಡುವಂತೆ ಕೋರುತ್ತಿದ್ದೇವೆ ಎಂದರು.
SUMMARY | Shimoga District Wine Merchants Association organised a symbolic protest in front of the Deputy Commissioner’s office in Shivamogga.
KEYWORDS | Wine Merchants Association, Shimoga, protest,