SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಶಿವಮೊಗ್ಗ | ಸ್ಕೇಟಿಂಗ್‌ನಲ್ಲಿ ಉತ್ತಮ ಸಾಧನೆಗೈದ ಮಂಡಗದ್ದೆಯ ಜುಲ್ಫುರವರ ಮಗ ಸೈಯದ್ ಫೈಸಲ್‌ರವರಿಗೆ ನಗರದ ಡಿಆರ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸನ್ಮಾನವನ್ನು ಮಾಡಲಾಯಿತು.
76 ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಡಿಆರ್ ಮೈದಾನದಲ್ಲಿ ಜಿಲ್ಲಾಡಳಿತ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಕ್ರೀಡಾ ಪಟುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಸೈಯದ್ ಪೈಝಲ್‌ರವರ ಕ್ರೀಡಾ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು.
ಸೈಯದ್ ಫೈಸಲ್‌ರವರು ಮೈಸೂರಿನಲ್ಲಿಇತ್ತೀಚೆಗೆ ನಡೆದ 62 ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಷಿಪ್‌ಲ್ಲಿ ದೇಶಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕದ ವಿಜೇತರಾಗಿದರು. ಅಷ್ಟೇ ಅಲ್ಲದೆ ಚಿಕ್ಕವಯಸ್ಸಿನಿಂದಲೂ ಸಹ ಸ್ಕೇಟಿಂಗ್‌ನಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ಫೈಸಲ್‌ರವರು ಇದುವರೆಗೆ ಅನೇಕ ಬೆಳ್ಳಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅವರಿಗೆ ವಿಶ್ವಾಸ್ ಹಾಗೂ ಆತಿಶ್‌ರವರು ತರಬೇತುದಾರರಾಗಿ ಉತ್ತಮ ತರಬೇತಿಯನ್ನು ನೀಡುತ್ತಿದ್ದಾರೆ. ಫೈಸಲ್‌ರವರು ಇದುವರೆಗೆ ಗಳಿಸಿದ ಪದಕಗಳನ್ನು ನೋಡುವುದಾದರೆ.
2019-20ರಲ್ಲಿ 7ರಿಂದ 9 ವರ್ಷ ವಯೋಮಾನದ ಒಳಗಿನ ಸ್ಕೇಟಿಂಗ್ ಕ್ರೀಡೆಯಲ್ಲಿ ಫೈಸಲ್‌ರವರು.ಸಹ್ಯಾದ್ರಿ ಉತ್ಸವದಲ್ಲಿ 2 ಚಿನ್ನದ ಪದಕ. ರಾಜ್ಯಮಟ್ಟದಲ್ಲಿ 1 ಬೆಳ್ಳಿ ಪದಕ, ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಜಿಲ್ಲೆಗೆ 3 ಚಿನ್ನದ ಪದಕ. ಹಾಗೂ ರಾಜ್ಯಮಟ್ಟದಲ್ಲಿ 3 ಕಂಚಿನ ಪದಕ ಗೆದ್ದಿದ್ದಾರೆ.
2020-21ರಲ್ಲಿ 7ರಿಂದ 9 ವರ್ಷ ವಯೋಮಾನದ ಒಳಗಿನ ಸ್ಕೇಟಿಂಗ್ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ1 ಬೆಳ್ಳಿ ಮತ್ತು 1 ಕಂಚಿನ ಪದಕ. ಜಿಲ್ಲಾ ಮಟ್ಟದಲ್ಲಿ 3 ಚಿನ್ನದ ಪದಕ ಹಾಗೂ ರಾಜ್ಯಮಟ್ಟದಲ್ಲಿ 3 ಕಂಚಿನ ಪದಕವನ್ನು ಗೆದ್ದಿದ್ದಾರೆ.
2021-22 ನೇ ಇಸವಿಯಲ್ಲಿ 9 ರಿಂದ 11 ವಯೋಮಿತಿಯೊಳಗಿನ ಸ್ಕೇಟಿಂಗ್‌ನಲ್ಲಿ ದಸರಾ ಕ್ರೀಡೆಯಲ್ಲಿ 2 ಬೆಳ್ಳಿ ಪದಕ. ಜಿಲ್ಲಾ ಮಟ್ಟದಲ್ಲಿ 3 ಚಿನ್ನದ ಪದಕ ಹಾಗೂ ರಾಜ್ಯ ಮಟ್ಟದಲ್ಲಿ 3 ಕಂಚಿನ ಪದಕವನ್ನು ಗೆದ್ದಿದ್ದಾರೆ.
2022-23 ನೇ ಇಸವಿಯ 9 ರಿಂದ11 ವರ್ಷ ವಯೋಮಿತಿಯೊಳಗಿನ ಕ್ರೀಡೆಯಲ್ಲಿ ಭಾಗವಿಸಿದ ಫೈಸಲ್ ಮೊಹಾಲಿಯಲ್ಲಿ ನಡೆದ ಓಪನ್ ನ್ಯಾಷನಲ್ಸ್ ನಲ್ಲಿ ಭಾಗವಹಿಸಿದ್ದರು. ಹಾಗೆಯೇ ಜಿಲ್ಲಾ ಮಟ್ಟದಲ್ಲಿ 3 ಚಿನ್ನದ ಪದಕ ಹಾಗೂ ರಾಜ್ಯಮಟ್ಟದಲ್ಲಿ 3 ಕಂಚಿನ ಪದಕವನ್ನುಗೆದ್ದಿದ್ದಾರೆ.
2023-24 ರಲ್ಲಿ 11ರಿಂದ 14 ವರ್ಷವಯೋಮಿತಿಯೊಳಗಿನವರ ಕ್ರೀಡೆಯಲ್ಲಿ ಮೊಹಾಲಿಯಲ್ಲಿ ನಡೆದ ಓಪನ್ ನ್ಯಾಷನಲ್ಸ್ ನಲ್ಲಿ ಭಾಗವಹಿಸಿದ್ದರು.ಬಯಲು ಸೀಮೆಯಲ್ಲಿ ನಡೆದ ಪಂದ್ಯದಲ್ಲಿ 3 ಕಂಚಿನ ಪದಕ, ಚಿಕ್ಕಬಳ್ಳಾಪುರದಲ್ಲಿ ನಡೆದ ಪಂದ್ಯದಲ್ಲಿ 1 ಚಿನ್ನ ಮತ್ತು 2 ಕಂಚಿನ ಪದಕ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಎಸ್ ಜಿಎಫ್ ಐ. ಜಿಲ್ಲೆಗಳಲ್ಲಿ 3 ಚಿನ್ನದ ಪದಕ. ರಾಜ್ಯಮಟ್ಟದ ಚಾಂಪಿಯನ್ ಶಿಪ್ ನಲ್ಲಿ 1 ಬೆಳ್ಳಿ ಮತ್ತು 2 ಕಂಚಿನ ಪದಕವನ್ನು ಗೆದ್ದಿದ್ಧಾರೆ.
2024-25 ವಯಸ್ಸಿನವರು 11ರಿಂದ 14 ವರ್ಷದೊಳಗಿನ ಮಯೋಮಿತಿಯ ಕ್ರೀಡೆಯಲ್ಲಿ ಗೋವಾದಲ್ಲಿ ನಡೆದ ಓಪನ್ ನ್ಯಾಷನಲ್ಸ್ ನಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದಲ್ಲಿ 1 ಚಿನ್ನ, 2 ಬೆಳ್ಳಿ. ರಾಜ್ಯಮಟ್ಟದ ಎಸ್ ಜಿ ಎಫ್ ಐ ನಲ್ಲಿ 2 ಬೆಳ್ಳಿ, 1 ಕಂಚಿನ ಪದಕವನ್ನ ಗೆದ್ದಿದ್ದಾರೆ. ಹಾಗೆಯೇ ಜಿಲ್ಲಾಮಟ್ಟದಲ್ಲಿ 3 ಚಿನ್ನದ ಪದಕ. ರಾಜ್ಯಗಳಲ್ಲಿ 1 ಬೆಳ್ಳಿ ಮತ್ತು 2 ಕಂಚಿನ ಪದಕ. ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 1 ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಹೀಗೆ ಮುಂದುವರೆದರೆ ಫೈಸಲ್ ಭವಿಷ್ಯದ ಭರವಸೆಯ ತಾರೆಯಾಗಲಿದ್ದಾರೆ.
SUMMARY | Syed Faizal, son of Zulfu of Mandagadde, was felicitated by the district administration at DR Grounds in the city for his outstanding performance in skating.
KEYWORDS | Syed Faizal, Mandagadde, district administration, skating,