SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 20, 2024
ಶಿವಮೊಗ್ಗ| ಭದ್ರಾವತಿ ಪಟ್ಟಣದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಮತ್ತು ಪ್ರವಾಹ ಸಂರಕ್ಷಣಾ ಗೋಡೆ ನಿರ್ಮಾಣ ಸೇರಿದಂತೆ ಇತರೆ ಜಲ ಸಂರಕ್ಷಣಾ ಕಾರ್ಯಗಳ ಅಭಿವೃದ್ದಿಗೆ ಹಣ ಮಂಜೂರು ಮಾಡಿಸುವ ಸಲುವಾಗಿ ಸಂಸದ ಬಿವೈ ರಾಘವೇಂದ್ರರವರರು ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ.
ರಾಷ್ಟ್ರೀಯ ನದಿ ಸಂರಕ್ಷಣಾ ಕಾರ್ಯಕ್ರಮ ಮತ್ತು ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶದ ಕಾರ್ಯಕ್ರಮದ ಅಡಿಯಲ್ಲಿ ಹಣ ಮಂಜೂರು ಮಾಡವಂತೆ ಸಂಸದರು ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಜಲ ಸಂರಕ್ಷಣಾ ಕಾರ್ಯಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಒಳಪಡಿಸಲಾಗಿದೆ. ಅವುಗಳು ಹೀಗಿವೆ
- ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿಯಲ್ಲಿರುವ ಜಯಚಾಮರಾಜೇಂದ್ರ ಸೇತುವೆಯಿಂದ ತುಂಗಾ ನದಿಯ ಉದ್ದಕ್ಕೂ ರಾಮೇಶ್ವರ ದೇವಸ್ಥಾನದವರೆಗೆ ಪ್ರವಾಹ ರಕ್ಷಣೆ ಗೋಡೆಯನ್ನು ನಿರ್ಮಿಸಲು ರೂ. 100 ಕೋಟಿ.
- ಭದ್ರಾವತಿ ಪಟ್ಟಣದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಮತ್ತು ಪ್ರವಾಹ ಸಂರಕ್ಷಣಾ ಗೋಡೆಗೆ ರೂ. 117.00 ಕೋಟಿ.
- ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಜಲ ಸಂರಕ್ಷಣಾ ಕಾರ್ಯಕ್ರಮ ಮತ್ತು ಕೆರೆಗಳ ಹೂಳು ತೆಗೆಯಲು ರೂ. 117.00 ಕೋಟಿ.
- ಶಿವಮೊಗ್ಗದ ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಶರಾವತಿ ನದಿ ಮತ್ತು ಅದರ ಉಪನದಿಗಳಿಗೆ ಅಡ್ಡಲಾಗಿ ಬ್ಯಾರೇಜ್ ಗಳ ನಿರ್ಮಾಣ ಮತ್ತು ಪಿಕಪ್‌ಗಳ ನಿರ್ಮಾಣಕ್ಕೆ ರೂ. 112.75 ಕೋಟಿ.
ಈ ಮೇಲಿನ ಜಲ ಸಂರಕ್ಷಣಾ ಕಾರ್ಯಕ್ರಮಗಳನ್ನು ಮಂಜೂರು ಮಾಡುವಂತೆ ಸಚಿವರಿಗೆ ಸಂಸದ ಬಿವೈ ರಾಘವೇಂದರರವರು ಕೋರಿದ್ದು,ಕೇಂದ್ರ ಜಲಶಕ್ತಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | Mp BY Raghavendra met Union Jal Shakti Minister C R Patil to sanction funds for the development of other water conservation works, including the construction of a bridge–barrage and flood protection wall in Bhadravathi town.
KEYWORDS | BY Raghavendra, Union Jal Shakti Minister, C R Patil, water conservation works,