SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 16, 2024
ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಹಾಗೂ ನರ್ತನ್ ನಿರ್ದೇಶನದ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗಿದ್ದು ಆರಂಭದಲ್ಲಿಯೇ ಬಿಗ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿ ಅಭಿಮಾನಿಗಳ ಪ್ರಕಾರ, ಶಿವಣ್ಣನ ನಟನೆಯೇ ಸಿನಿಮಾದ ಬಿಗ್ ಹೈಲೆಟ್ಸ್ ಎಂಬ ಅಭಿಪ್ರಾಯ ಹೊರಬಿದ್ದಿದೆ.
2017 ರಲ್ಲಿ ರಿಲೀಸ್ ಆದ ಶಿವಣ್ಣ ಹಾಗೂ ಮುರುಳಿ ನಟನೆಯ ಮಫ್ತಿ ಚಿತ್ರದ ಫ್ರಿಕ್ವೆಲ್ ಆಗಿ ಬೈರತಿ ರಣಗಲ್ ಹೊರಬಿದ್ದಿದ್ದು ರಿಲೀಸ್‌ಗೂ ಮೊದಲು ದೊಡ್ಡ ಕ್ರೇಜ್ ಪಡೆದುಕೊಂಡಿತ್ತು. ಇದೀಗ ಗ್ರ್ಯಾಂಡ್ ರಿಲೀಸ್ ಆಗಿರುವ ಸಿನಿಮಾ ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ.


ಶಿವಣ್ಣನ ಲುಕ್ ಹಾಗೂ ಶಿವಣ್ಣನ ಸ್ಟೈಲ್ ಗೆ ಅವರ ಫ್ಯಾನ್ಸ್ ಪುಲ್ ಖುಷ್ ಆಗಿದ್ದಾರೆ. ಅಲ್ಲದೆ ಸ್ವತಃ ಡಾಲಿ ಧನಂಜಯ್ ಸೇರಿದಂತೆ ಹಲವು ಫ್ಯಾನ್ಸ್ ಬೈರತಿ ರಣಗಲ್ ಕಾಸ್ಟ್ಯೂಮ್‌ನಲ್ಲಿ ಶಿವಣ್ಣನ ಸಿನಿಮಾ ವೀಕ್ಷಿಸಿ ಥಿಯೇಟರ್ ಮುಂದೆ ಸ್ಟೆಪ್ ಹಾಕಿದ್ದಾರೆ. ಇನ್ನೂ ಫ್ಯಾನ್ಸ್ ಫೇಜ್‌ಗಳಲ್ಲಂತೂ ಶಿವಣ್ಣರ ಸಿನಿಮಾ ಸೌಂಡ್ ಸಖತ್ ಜೋರಾಗಿದೆ.
ಮೂಲಗಳ ಪ್ರಕಾರ, ಸಿನಿಮಾ ಮೊದಲೇ ದಿನವೇ ಐದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಇನ್ನೂ ವಿಕೇಂಡ್ ಕಲೆಕ್ಷನ್ ಇನ್ನೂ ಭರ್ಜರಿಯಾಗಿರಲಿದೆ ಎಂಬ ನಿರೀಕ್ಷೆ ಹುಟ್ಟುಕೊಂಡಿದೆ. ಮೇಲಾಗಿ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ರೇಟಿಂಗ್ ಸಿಗುತ್ತಿದೆ. ಅದರಲ್ಲಿಯು ಬುಕ್ ಮೈ ಶೋ ನಲ್ಲಿ 9.6 ರೇಟಿಂಗ್ ನೀಡಲಾಗಿದೆ.
ಸಿನಿಮಾ ಬಗ್ಗೆ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ಗಳಲ್ಲಿ ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಡಿವೈಡ್ ಮಾಡಲಾಗುತ್ತಿದೆ. ಫಸ್ಟ್ ಹಾಫ್ ಬ್ಲಾಕ್‌ಬಸ್ಟರ್ ಸೆಕೆಂಡ್ ಹಾಫ್ ಡಿಸೆಂಟ್ ಸಿನಿಮಾ ಎಂದು ಸೋಶಿಯಲ್ ಮೀಡಿಯಾ ಮಂದಿ ಅರ್ಥೈಸುತ್ತಿದ್ದಾರೆ. ಅಲ್ಲದೆ ಶಿವಣ್ಣನ ನಟನೆಗೆ 100 ಪರ್ಸೆಂಟ್ ಮಾರ್ಕ್ ನೀಡುತ್ತಿದ್ದಾರೆ.
SUMMARY| bhairathi ranagal,bhairathi ranagal review,bhairathi ranagal narthan,bhairathi ranagal shivanna,bhairathi ranagal making,bhairathi ranagal public review,bhairathi ranagal songs,bhairathi ranagal bgm,bhairathi ranagal sriimurali,bhairathi ranagal ravi basruru,bhairathi ranagal audio song,bhairathi ranagal teaser,bhairathi ranagal teaser ost,bhairathi ranagal ost,bhairathi ranagal trailer,bhairathi ranagal movie review,bhairathi ranagal release celebration
KEY WORDS |bhairathi ranagal,bhairathi ranagal review,bhairathi ranagal narthan,bhairathi ranagal shivanna,bhairathi ranagal making,bhairathi ranagal public review,bhairathi ranagal songs,bhairathi ranagal bgm,bhairathi ranagal sriimurali,bhairathi ranagal ravi basruru,bhairathi ranagal audio song,bhairathi ranagal teaser,bhairathi ranagal teaser ost,bhairathi ranagal ost,bhairathi ranagal trailer,bhairathi ranagal movie review,bhairathi ranagal release celebration