SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 13, 2024
5 ತಿಂಗಳ ಹಿಂದೆ ಕಳುವಾಗಿದ್ದ ಹೋಂಡಾ ಆಕ್ಟೀವ ಬೈಕ್‌ನ್ನು ನ್ಯೂಟೌನ್ ಪೊಲೀಸ್ ಠಾಣೆ ಭದ್ರಾವತಿಯ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ
ಕಳೆದ ಜುಲೈ ತಿಂಗಳಲ್ಲಿ ಭದ್ರಾವತಿ ಸಿದ್ಧಾಪುರ ಬೈಪಾಸ್‌ನ ಬಳಿ ಬೈಕ್‌ವೊಂದು ಕಳುವಾಗಿತ್ತು. ಈ ಸಂಬಂಧ ಬೈಕ್ ಮಾಲಿಕ ನವೀನ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ 0104/2024 ಕಲಂ 303 (2) BNS ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದರ ಜಾಡು ಹಿಡಿದ ಪೊಲೀಸರು ಶ್ರೀ ಟಿ ರಮೇಶ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ, ಟಿ.ಪಿ ಮಂಜಪ್ಪ ಎ.ಎಸ್ ಐ ಹಾಗೂ ಠಾಣಾ ಸಿಬ್ಬಂಧಿಗಳಾದ ಸಿ.ಹೆಚ್.ಸಿ ನವೀನ ಮತ್ತು ರಘು ಬಿ.ಎಂ. ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿಸಲಾಗಿತ್ತು, ಈ ತಂಡ ಕಾರ್ಯಾಚರಣೆಯನ್ನು ನಡೆಸಿ ಬೈಕ್ ಕಳ್ಳನನ್ನು ಹಿಡಿದಿದ್ದಾರೆ. ಪ್ರಕರಣದ ಆರೋಪಿ ರಂಗನಾಥ ಆರ್ ಎಂಬ ಕಳ್ಳ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದು, ಈತನನ್ನು ದಸ್ತಗಿರಿ ಮಾಡಿ, ಆತನಿಂದ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ 02 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 1,10,000/- ರೂಗಳ 02 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
SUMMARY | The police have recovered a bike named Honda Activa DLX, which was stolen five months ago, and arrested the accused.
KEYWORDS | Honda Activa DLX, arrested accused, Police, shivamogga,