SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 7, 2024
ಈಗ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಬಹಳ ಸದ್ದು ಮಾಡುತ್ತಿವೆ . ಪೆಟ್ರೋಲ್ ರೇಟ್ ಹೆಚ್ಚಳದ ಹಿನ್ನೆಲೆ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಖರ್ಚಿಲ್ಲದ ಎಲೆಕ್ಟ್ರಿಕ್ ಬೈಕನ್ನು ಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಈ ಹಿಂದೆ ಟಿವಿಎಸ್, ಚೇತಕ್, ಓಲಾ, ಹೀಗೆ ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಟ್ಟು ಸೈ ಎನಿಸಿಕೊಂಡಿದ್ದವು. ಇದರ ನಡುವೆ ಹೋಂಡಾ ಕಂಪನಿಯ ಆಕ್ಟಿವಾ ಸ್ಕೂಟಿ ಸಹ ಆಕ್ಟಿವಾ ಈ ಮತ್ತು ಆಕ್ಟಿವಾ ಕ್ಯೂ ಸಿ ಒನ್ ಎಂಬ ಎರಡು ಮಾದರಿಯಲ್ಲಿ ಇ ವಿ ಸ್ಕೂಟಿಯನ್ನು ಬಿಡಲು ಸಿದ್ಧವಾಗಿದೆ.
ಹೇಗಿರಲಿದೆ ಆಕ್ಟಿವಾ ಇವಿ ಗ್ರಾಹಕರ ಕೈ ಸೇರೋದು ಯಾವಾಗ..?
ಈ ಆಕ್ಟಿವಾ ಬೈಕ್ ಗಳ ಮುಂಗಡ ಬುಕಿಂಗ್‌ಗಳು ಗ್ರಾಹಕರಿಗೆ ಹೊಸ ವರ್ಷದ ಪ್ರಯುಕ್ತ ಅಂದರೆ ಜನವರಿ 2025ರಿಂದ ಓಪನ್ ಆಗಲಿದೆ. ಹಾಗೆಯೇ ಬೈಕ್ ಅನ್ನು ಬುಕ್ ಮಾಡಿದರೆ ಫೆಬ್ರವರಿ 2025 ರಂದು ಗ್ರಾಹಕರ ಕೈ ಸೇರಲಿದೆ. ಆಕ್ಟಿವಾ ಇ 1.5 kWh ಬ್ಯಾಟರಿ ಸಾಮರ್ಥ್ಯ ವನ್ನೂ ಹೊಂದಿದ್ದು, ಇದರಲ್ಲಿ ಮೂರು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ ಅವುಗಳೆಂದರೆ, ಇಕೋ ಮೂಡ್, ಸ್ಟ್ಯಾಂಡರ್ಡ್ ಮೂಡ್, ಮತ್ತು ಸ್ಪೋರ್ಟ್ಸ್ ಮೂಡ್ ನಲ್ಲಿ ಈ ಬೈಕ್‌ನ್ನು ಓಡಿಸಬಹುದು.
ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ಮೈಲೇಜ್ ಬರುತ್ತೆ. ಚಾರ್ಜ್ ಆಗೋಕೆ ಎಷ್ಟು ಸಮಯ ಬೇಕು.
ಆಕ್ಟಿವಾ QC1 1.5 kWh ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಪೂರ್ಣ ಚಾರ್ಜ್‌ನಲ್ಲಿ 80 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಹಾಗೆಯೇ ಮನೆಯಲ್ಲಿಯೇ ಹೋಮ್ ಚಾರ್ಜಿಂಗ್ ಸೆಟಪ್ ಅನ್ನು ಸಹ ನಾವು ಮಾಡಿಕೊಳ್ಳಬಹುದು. ಇದು ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು 6 ಗಂಟೆ 50 ನಿಮಿಷಗಳನ್ನು ತೆಗೆದು ಕೊಳ್ಳುತ್ತದೆ. ಹಾಗೆಯೇ ಇದನ್ನು ಪ್ರತಿ ಗಂಟೆಗೆ 50 ಕಿಲೋ ಮೀಟರ್ ಸ್ಪೀಡ್ ನಲ್ಲಿ ಓಡಿಸಬಹುದು.
ಆಕ್ಟಿವಾ ಎಲೆಕ್ಟಿಕ್ ಬೈಕ್‌ನ ಬೆಲೆ ಎಷ್ಟು ಬೈಕ್ ನಲ್ಲಿರುವ ಫೀಚರ್ಸ್ ಗಳೇನು
ಈ ಎಲೆಕ್ಟ್ರಿಕ್ ಆಕ್ಟಿವಾ ಸ್ಕೂಟರ್ ನ ಬೆಲೆ ಸರಿ ಸುಮಾರು 100000 ದಿಂದ 1,20000 ರೂಪಾಯಿ ವರೆಗೆ ಇರಲಿದೆ. ಈ ಸ್ಕೂಟರನ್ನು ಹೊಸ ವಿನ್ಯಾಸದಲ್ಲಿ ಡಿಸೈನ್ ಮಾಡಲಾಗಿದೆ. ಇದರಲ್ಲಿ ಬ್ಲೂಟತ್ ಕನೆಕ್ಟಿವಿಟಿ ಚಾರ್ಜಿಂಗ್ ಪೋರ್ಟರ್ ಸ್ಮಾರ್ಟ್ ಕೀ ಸಿಸ್ಟಮ್ ಸೇರಿದಂತೆ ಇನ್ನಿತರ ಫೀಚರ್ಸ್ ಅನ್ನು ಅಳವಡಿಸಲಾಗಿದೆ. ಹಾಗೆಯೇ ಇ ಸ್ಕೂಟರ್ ಗಳು ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಸೆರಿನಿಟಿ ಬ್ಲೂ, ಮ್ಯಾಟ್ ಫಾಗ್ ಸಿಲ್ವರ್ ಮೆಟಾಲಿಕ್ ಮತ್ತು ಪರ್ಲ್ ಅಗ್ನಿಯಸ್ ಬ್ಲ್ಯಾಕ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಿರಲಿದೆ.
SUMMARY | Currently, Honda’s Activa Scooty is also all set to launch the EV Scooty in two variants, the Activa E and the Activa QCone.
KEYWORDS | Honda’s Activa, Activa E and the Activa Qc1, EV Scooty,