SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 24, 2025
ಶಿವಮೊಗ್ಗ | ಬಿಜೆಪಿ ಶಾಸಕರಾದ ಸುನಿಲ್ ಕುಮಾರ್‌ರವರು ಶಾಸಕರ ಅಮಾನತು ಕುರಿತಾಗಿ ವಿಧಾನ ಮಂಡಲಕ್ಕೆ ಅವಮಾನ ಮಾಡುವ ರೀತಿಯಲ್ಲಿ ಸಭಾಪತಿಗಳಿಗೆ ಪತ್ರವನ್ನು ಬರೆದಿದ್ದು, ಅಕ್ಷಮ್ಯ ಅಪರಾಧವಾಗಿದೆ. ಹಾಗಾಗಿ ಅವರ ಮೇಲೆ ಸಭಾಪತಿಗಳು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯವರು ಸದನದಲ್ಲಿ ಬಜೆಟ್ ನ್ಯೂನ್ಯತೆಯ ಬಗ್ಗೆ ಚರ್ಚೆಮಾಡುವುದನ್ನು ಬಿಟ್ಟು ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ.ಬಜೆಟ್‌ನಲ್ಲಿ ಚರ್ಚೆ ಮಾಡುವಾಗ ಮುಖ್ಯಮಂತ್ರಿಗಳ ಹೇಳಿಕೆಗೂ ಅವಕಾಶ ನೀಡದ ರೀತಿಯಲ್ಲಿ ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆ. ಅಷ್ಟೇ ಅಲ್ಲದೆ ಸಭಾಪತಿಗಳ ಮೇಲೆ ಬಜೆಟ್ ಪ್ರತಿ ಹರಿದು ಅತ್ಯಂತ ಬೇಜವಾಬ್ದಾರಿ ತನದಿಂದ ವಿರೋಧ ಪಕ್ಷಗಳು ವರ್ತಿಸಿವೆ.ಆ ಹಿನ್ನಲೆ ಅಶಿಸ್ತಿನ ಮೇರೆಗೆ ಸ್ಪೀಕರ್‌ರವರು 18 ಜನ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತುಗೊಳಿಸಿದ್ದಾರೆ. ಇದರ ನಡುವೆ ವಿರೋಧ ಪಕ್ಷದವರು ಹೊರಗೆ ಬಂದಮೇಲೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಸಭಾಧ್ಯಕ್ಷರ ನಿರ್ಣಯವನ್ನು ಸಹ ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ರವರು ಸಭಾಪತಿಯವರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಅವರು ಇಡೀ ಪೀಠವನ್ನು ಅವಮಾನ ಮಾಡುವ ಒಂದು ವಾಕ್ಯವನ್ನು ಬರೆದಿದ್ದಾರೆ. ಅದೇನೆಂದರೆ ಈ ಆದೇಶವನ್ನು ನೀವೇ ಮಾಡಿದ್ದಾ ಅಥವ ಇದು ಮುಖ್ಯಮಂತ್ರಿಗಳು ನಿಮ್ಮ ಕೈ ಹಿಡಿದು ಬರೆಸಿದ್ದ ಎಂದಿದ್ದಾರೆ. ಸಭಾಪತಿಗಳ ನಿರ್ಣಯ ವ್ಯಕ್ತಿಗತವಾಗಿ ಇರಲಿಲ್ಲ ಸದನದ ಎಲ್ಲ ಸದಸ್ಯರ ನಿರ್ಣಯ ಆಗಿತ್ತು. ಆದರೂ ಸಹ ಸುನಿಲ್ ಕುಮಾರ್ ಇಂತಹ ಮಾತುಗಳನ್ನು ಆಡಿರುವುದು ಸದನದ ಗೌರವಕ್ಕೆ ದಕ್ಕೆ ವುಂಟುಮಾಡಿದೆ. ಈ ಹಿನ್ನಲೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದಿದ್ದಾರೆ.
SUMMARY | Bjp MLA Sunil Kumar has written a letter to the Speaker in an insulting manner to the Assembly over the suspension of the MLAs, which is an unforgivable offence.
KEYWORDS | Bjp MLA , Sunil Kumar, Speaker, Assembly ,