SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 7, 2024
ಐಕಾನ್ ಸ್ಟಾರ್ ಅಲ್ಲೂ ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಈಗಾಗಲೇ ವಿಶ್ವದಾದ್ಯಂತ 10 ರಿಂದ 12 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿ ಧೂಳ್ ಎಬ್ಬಿಸುತ್ತಿದೆ. 3 ವರ್ಷಗಳ ಬಳಿಕ ರಿಲೀಸ್ ಆದ ಈ ಸೀಕ್ವೆಲ್ ಚಿತ್ರವನ್ನು ಅಲ್ಲೂ ಅರ್ಜುನ್ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇದರ ನಡುವೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ 294 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಪುಷ್ಪ 2 ಸಿನಿಮಾ ಮುಂಗಡ ಬುಕ್ಕಿಂಗ್ ನಲ್ಲಿಯೇ 105.67 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೊಳಗೊಂಡು ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ನಲ್ಲಿ ಒಟ್ಟು ಪುಷ್ಪ 2 ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 294 ಕೋಟಿ ಗಳಿಸಿದೆ. ಈ ಕಲೆಕ್ಚನ್ ಬಗ್ಗೆ ಪುಷ್ಪ 2 ನಿರ್ಮಾಪಕರೇ ಆಫೀಶಿಯಲ್ ಅಗಿ ಪೋಸ್ಟರ್ ಬಿಡುವ ಮೂಲಕ ಅನೌನ್ಸ್ ಮಾಡಿದ್ದಾರೆ.
ಬಾಹುಬಲಿ, ಕಲ್ಕಿ, ಆರ್ ಆರ್ ಆರ್, ಕೆಜಿಎಫ್ 2, ದಾಖಲೆ ಉಡೀಸ್
ಈ ಹಿಂದೆ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅಭಿನಯದ ತ್ರಿಬಲ್ ಆರ್ ಸಿನಿಮಾ ಮೊದಲ ದಿನ 223 ಕೋಟಿ ಕಲೆಕ್ಷನ್ ಮಾಡಿ ಇದುವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎನಿಸಿಕೊಂಡಿತ್ತು. ಆದರೆ ಪ್ರಸ್ತುತ ಪುಷ್ಪ 2 ಚಿತ್ರ ಆ ದಾಖಲೆಯನ್ನು ಮುರಿದು ಮೊದಲ ದಿನ 294 ಕೋಟಿ ಕಲೆಕ್ಷನ್ ಮಾಡಿ ಆ ದಾಖಲೆಯನ್ನು ಮುರಿದಿದೆ. ಅಷ್ಟೇ ಅಲ್ಲದೇ ಅಲ್ಲದೆ ಹಿಂದೆ ತ್ರಿಬಲ್ ಆರ್ ಕೆಜಿಎಫ್ ಚಿತ್ರಗಳು ಮುಂಗಡ ದಾಖಲೆಗಳನ್ನು ಸಹ ಪುಷ್ಪ2 ಚಿತ್ರ ಮುರಿದಿದೆ. ಪುಷ್ಪ 2 ಚಿತ್ರ ವಿಶ್ವಾದ್ಯಂತ ಮೊದಲ ದಿನದ ಮುಂಗಡ ಬುಕಿಂಗ್ ನಲ್ಲಿಯೇ .105.67 ಕೋಟಿ. ಸಂಗ್ರಹ ವಾಗಿತ್ತು. ಇದರೊಂದಿಗೆ, ಕೆಜಿಎಫ್ 2, ಬಾಹುಬಲಿ 2 ಮತ್ತು ಕಲ್ಕಿ 2898 AD ಅನ್ನು ಹಿಂದಿಕ್ಕಿ ಬುಕ್ ಮೈ ಶೋನಲ್ಲಿ 1 ಮಿಲಿಯನ್ ಟಿಕೆಟ್‌ಗಳನ್ನು ಸೇಲ್ ಮಾಡಿದ ಚಿತ್ರ ಎಂಬ ಮತ್ತೊಂದು ದಾಖಲೆಯನ್ನು ಪುಷ್ಪ 2 ಸೃಷ್ಟಿಸಿದೆ. ಮೊದಲ ದಿನ ಭಾರತದಲ್ಲಿ ಪುಷ್ಪ 2 ಸಿನಿಮಾದ ಸುಮಾರು 31,76,479 ಟಿಕೆಟ್‌ಗಳು ಮಾರಾಟವಾಗಿವೆ.
SUMMARY | Meanwhile, the film has collected Rs 294 crore on its first day at the box office. It is said.
KEYWORDS | pushpa 2, allu arjun, box office collection, filmy news,