SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 5, 2025
ಶಿವಮೊಗ್ಗ | ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸ್ಟೇಟ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಜಿಲ್ಲಾ ಅಮೆಚುರ್ ಬಾಕ್ಸಿಂಗ್ ಅಸೋಸಿಯೇಷನ್ ಕ್ರೀಡಾಪಟುಗಳಾದ ನಿವೇದಿತಾ.ಆರ್ ಇವರು 65 ರಿಂದ 70 ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಹಾಗೂ ಸಮೃದ್ 60 ರಿಂದ 65 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ ಎಂದು ಶಿವಮೊಗ್ಗ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಯೋಗೀಶ್ ಹೇಳಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಒಲಂಪಿಕ್ ಸಹಯೋಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೀನಾಕ್ಷಿ ಭವನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿವೇದಿತಾ.ಆರ್ ಹಾಗೂ ಶಿವಮೊಗ್ಗದ ವಿದ್ಯಾಭಾರತಿ ಕಾಲೇಜಿನ ವಿದ್ಯಾರ್ಥಿ ಸಮೃದ್ ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಪ್ರಶಸ್ತಿಯನ್ನು ತಂದಿದ್ದಾರೆ. ಈ ಇಬ್ಬರು ಶಿವಮೊಗ್ಗ ಜಿಲ್ಲೆಗೆ ಕ್ರೀಡಾ ವಿಭಾಗದಲ್ಲಿ ಕೀರ್ತಿ ತಂದಿದ್ದು, ಈ ಇಬ್ಬರು ಶಿವಮೊಗ್ಗದ ಬಾಕ್ಸಿಂಗ್ ಕೋಚ್ ಮೀನಾಕ್ಷಿಯವರ ಬಳಿ ತರಬೇತಿ ಪಡೆದಿದ್ದಾರೆ ಎಂದರು.ಇಬ್ಬರು ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಸೇರಿದಂತೆ ಪೋಷಕರು ಹಾಗೂ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ಆಡಿ ತಂದೆಗೆ ಒಳ್ಳೆಯ ಹೆ ಸರು ತರಬೇಕೆಂದುಕೊಂಡಿದ್ದೇನೆ
ಚಿನ್ನದ ಪದಕ ಪಡೆದಿರುವ ನಿವೇದಿತ.ಆರ್ ಮಾತನಾಡಿ, ಇದು ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ರಾಜ್ಯಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಆಟ ಆಡಿದ್ದೇನೆ, ಅದೇ ರೀತಿ ರಾಷ್ಟ್ರಮಟ್ಟದಲ್ಲಿ ಆಡಿ, ನನ್ನ ತಂದೆಗೆ ಒಳ್ಳೆಯ ಹೆಸರು ತರಬೇಕೆಂದಿದ್ದೇನೆ ಎಂದರು.
SUMMARY | Niveditha R won the gold medal in the 65-70 kg category while Samrudh won the bronze medal in the 60-65 kg category
KEYWORDS | Niveditha R, gold medal, bronze medal, District, Amateur Boxing Association,