SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 8, 2025
ಶಿವಮೊಗ್ಗ | ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ್ ಶಿಷ್ಯ ವೃಂದದ ವತಿಯಿಂದ ಶ್ರೀ ಮಧ್ವಾದಿರಾಜರ 545 ನೇ ಜಯಂತೋತ್ಸವನ್ನು ಫೆಬ್ರವರಿ 9 ರಂದು ರಾಜಬೀದಿ ಉತ್ಸವದ ಮೂಲಕ ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದೇವೆ. ಎಂದು ಸಮಾಜದ ಸಂಚಾಲಕ ಓಂ ಗಣೇಶ್ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯ ವೃಂದ ಶಿವಮೊಗ್ಗ ವತಿಯಿಂದ ಹಿಂದಿನಿಂದಲೂ ಈ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ವಿಶೇಷ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಆಚರಿಸಬೇಕು ಎಂದು ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮಿಗಳ ಶ್ರೀಪಾದಂಗಳವರ ಕೃಪಾಶೀರ್ವಾದೊಂದಿಗೆ ಭಜನೆ,ವೇದ ಘೋಷ, ಪ್ರವಚನ, ಚಂಡೆವಾದ್ಯದೊಂದಿಗೆ ಶ್ರೀ ಮಧ್ವಾದಿರಾಜ ಸ್ವಾಮಿಗಳ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ. ಈ ಮೆರವಣಿಗೆ ಕಾರ್ಯಕ್ರಮವು ಸಂಜೆ 4 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಆರಂಭಗೊಂಡು ಗಾಂಧಿಬಜಾರ್ ಮೂಲಕ, ನೆಹರು ರಸ್ತೆ, ಮಾರ್ಗವಾಗಿ ಜೈಲ್ ಸರ್ಕಲ್‌ನಲ್ಲಿ ಇರುವ ನಮ್ಮ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂದಿರಕ್ಕೆ 7 ಗಂಟೆಗೆ ಬಂದು ತಲುಪುತ್ತದೆ.
ಈ ರಾಜಬೀದಿ ಉತ್ಸವದ ನಂತರ ಕಲ್ಯಾಣ ಮಂದಿರದಲ್ಲಿ ಶ್ರೀ ಮಧ್ವಾಧಿರಾಜರಿಗೆ ಪೂಜ ನಮನ ಕಾರ್ಯಗಳು ನೆರವೇರಲಿದ್ದು.ನಂತರ ನಮ್ಮ ಸಮಾಜದ ಮಹಿಳೆಯರಿಂದ “ಶ್ರೀ ಲಕ್ಷ್ಮೀ ಶೋಭಾನೆ” ಕಾರ್ಯಕ್ರಮ ನಂತರ ಶ್ರೀ ಮಠದಿಂದ ಬಂದ ಮಂತ್ರಾಕ್ಷತೆ ವಿತರಣೆ.ನಂತರ ತೀರ್ಥಪ್ರಸಾದ ಹಾಗೂ ಉಪಹಾರ ಏರ್ಪಡಿಸಲಾಗಿದೆ. ಎಲ್ಲಾ ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಎಂದು ಸಮಾಜದ ಪರವಾಗಿ ಕೇಳಿಕೊಳ್ಳುತ್ತೇವೆ ಎಂದರು.
SUMMARY | The 545th birth anniversary of Sri Madhvadiraja will be celebrated on February 9 at Daivajna Brahmin Kalyana Mandir through Rajabeedi Festival.
KEYWORDS | Sri Madhvadiraja, 545th birth anniversary, Rajabeedi Festival,