SHIVAMOGGA | MALENADUTODAY NEWS | ಮಲೆನಾಡು ಟುಡೆ
ಶಿವಮೊಗ್ಗ | ಮಲೆನಾಡು ದೇವಾಂಗ ಸಮಾಜದ ವತಿಯಿಂದ ದೇವರದಾಸಿಮಯ್ಯ ಸಭಾ ಭವನದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಆಚರಣೆ ಸಮಾರಂಭ ಸಭಾ ಕಾರ್ಯಕ್ರಮವನ್ನು ಫೆಬ್ರವರಿ 23 ರಂದು ಬೆಳಗ್ಗೆ 10.00 ಗಂಟೆಗೆ ನಗರದ ಕುವೆಂಪು ರಂಗಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಮಲೆನಾಡು ದೇವಾಂಗ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಕಟ್ಟಡವನ್ನು 1 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರೂ.75 ಲಕ್ಷ ಹಣ ಸರ್ಕಾರದಿಂದ ಬಂದಿದ್ದು, ರೂ.25 ಲಕ್ಷ ಹಣವನ್ನು ಸಮಾಜದಿಂದ ಹಾಗೂ ದಾನಿಗಳು ನೀಡಿದ ದೇಣಿಗೆ ಮೂಲಕ, 50 ಚದರ ವಿಸ್ತೀರ್ಣದ ಕಟ್ಟಡದಲ್ಲಿ ಸುಮಾರು 200 ರಿಂದ 250 ಜನ ಕೂರಬಹುದಾದ ಮಿನಿ ಹಾಲ್ ಕೂಡಾ ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಂಪಿ – ಹೇಮಕೂಟದ ಗಾಯತ್ರಿ ಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮಿಗಳು, ಧಾರವಾಡ ಜಿಲ್ಲೆಯ ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ಡು, ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಭಾ ಸದಸ್ಯ ಡಾ. ಕೆ.ನಾರಾಯಣ್, ಕಟ್ಟಡದ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಲಿದ್ದಾರೆ. ದಾನಿಗಳ ನಾಮಫಲಕವನ್ನು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ದಾನಿಗಳ ಛಾಯಾಚಿತ್ರವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅನಾವರಣಗೊಳಿಸಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನವನ್ನು ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಶಾಸಕಿ ಉಮಾಶ್ರೀ ಮತ್ತು ಮಾಜಿ ವಿಧಾನಸಭಾ ಸದಸ್ಯೆ ಎಂ.ಡಿ.ಲಕ್ಷ್ಮೀನಾರಾಯಣ್ ನೆರವೇರಿಸಲಿದ್ದಾರೆ. ದಾನಿಗಳಿಗೆ ಸನ್ಮಾನವನ್ನು ಅಖಿಲ ಭಾರತ ದೇವಾಂಗ ಸಂಘದ ಅಧ್ಯಕ್ಷ ಅರುಣ್ ವರಾಡೆ, ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹಾಗೂ ಡಾ.ಧನಂಜಯ ಸರ್ಜಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕರಾದ ಅಂತರಾಷ್ಟ್ರೀಯ ಕ್ರೀಡಾಪಟು ಡಾ. ಡಿ.ನಾಗರಾಜ್, ಚಲನಚಿತ್ರ ನಟ ಶ್ರೀನಿವಾಸಮೂರ್ತಿ, ಲೇಖಕ ರಮೇಶ್ ಬಾಬು ಯಾಳಗಿ, ಡಿ.ಆರ್.ಡಿ.ಓ ಡೈರೆಕ್ಟರ್ ಜನರಲ್ ಹಾಗೂ ವಿಶಿಷ್ಟ ವಿಜ್ಞಾನಿ ಡಾ. ಎಸ್.ಗುರುಪ್ರಸಾದ್, ಮೇಜರ್ ಹೆಚ್.ಆರ್.ಮಧುಸೂಧನ್ ಇವರಿಗೆ ಸನ್ಮಾನಿಸಲಾಗುವುದು. ಸಮಾಜದ ಹಿರಿಯರಾದ ಹುಚ್ಚರಾಯಪ್ಪ, ಹೆಚ್.ತಿಮ್ಮಪ್ಪ, ಟಿ.ಕೆ.ಶಂಕರಪ್ಪ, ಡಿ.ತಿಮ್ಮಪ್ಪ, ಅರೇಕಲ್ ಅರ್ ಕಾಂತರಾಜ್, ಬೆಂಕಿ ಶೇಖರಪ್ಪ ಇವರಿಗೆ ಗೌರವಿಸಲಾಗುವುದು ಎಂದರು.
SUMMARY | The golden jubilee celebrations will be held on Feb. 23 at 10.00 am at Kuvempu Rangandira in city
KEYWORDS | golden jubilee, celebrations, Kuvempu Rangamandira, shimoga,