ಫುಟ್‌ಬಾಲ್‌ ಮೈದಾನದಲ್ಲಿ ಪಟಾಕಿ ಸ್ಪೋಟ  | 30 ಕ್ಕೂ ಹೆಚ್ಚು ಜನರಿಗೆ ಗಾಯ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 19, 2025

ಕೇರಳದ ಮಲಪ್ಪುರಂನ ಅರಿಕೋಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ಸೋಮವಾರ ಪಟಾಕಿಗಳು ಸ್ಫೋಟಗೊಂಡು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಭೀಕರ ದೃಶ್ಯವನ್ನು ಆ ಸ್ಥಳದಲ್ಲಿದ್ದ ಒಬ್ಬರು ಸೆರೆ ಹಿಡಿದಿದ್ದು ಆ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.



ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ಆರಂಭವಾಗುವ ಮೊದಲು ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ಆ ವೇಳೆ ಪಟಾಕಿಯ ಸ್ಪೋಟದ ತೀವ್ರತೆ ಹೆಚ್ಚಾಗಿ ಪಂದ್ಯ ವೀಕ್ಷಿಸಲು ಜನರು ಕುಳಿತಿದ್ದ ಸ್ಥಳಕ್ಕೆ ಬೆಂಕಿ ಹರಡಿತು. ಈ ಹಿನ್ನಲೆ ಮೈದಾನದಲ್ಲಿದ್ದ 30 ಕ್ಕೂ ಹೆಚ್ಚು ಜನರಿಗೆ ಗಾಯಗಳಾದ್ದು, ಅವರನ್ನು ಕೂಡಲೇ   ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

SUMMARY |  More than 30 people were injured when firecrackers exploded at a football ground near Arikode in Kerala’s Malappuram on Monday, police said.

KEYWORDS |  firecrackers, Kerala, Malappuram, viral news, 

Leave a Comment