SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 19, 2025
ಶಿವಮೊಗ್ಗ | ರೊಮ್ಯಾಂಟಿಕ್ ಕಥಾ ಹಂದರ ಹೊಂದಿರುವ ಭಾವ ತೀರಾ ಯಾನ ಚಿತ್ರವು ಇದೆ ಫೆಬ್ರವರಿ 21 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಮಯೂರ್ ಅಂಬೆಕಲ್ಲು ತಿಳಿಸಿದರು.
ಇಂದು ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ ಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ನಮ್ಮ ಭಾವ ತೀರಾ ಯಾನ ಚಿತ್ರದಲ್ಲಿ ಯಾವುದೇ ಹೊಡಿ ಬಡಿ ಹಾಗೂ ಮುಗುಗರ ಉಂಟುಮಾಡುವ ದೃಷ್ಯಗಳಿಲ್ಲ. ನಮ್ಮ ಸಿನಿಮಾವನ್ನು ಕುಟುಂಬ ಸಮೇತ ನೋಡುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಪ್ರೀತಿಯ ಹೊಸ ಆಯಾಮವನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದೇವೆ. ಪ್ರೀತಿ ಎಂಬ ವಿಷಯದ ಸುತ್ತ ಸಾಗುವ ಸುಂದರ ಪ್ರೇಮ ಕಥೆ ಪ್ರತಿಯೊಬ್ಬರಿಗೂ ಹತ್ತಿರವಾಗುವ ರೀತಿಯಲ್ಲಿ ಮೂಡಿಬಂದಿದೆ. ಈ ಚಿತ್ರವನ್ನು ಬೆಂಗಳೂರು ಸಕಲೇಶಪುರ ಸೇರಿದಂತೆ ವಿವಿಧ ಭಾಗಗಳಲ್ಲಿ 20 ದಿನ ಗಳ ಕಾಲ ಶೂಟಿಂಗ್ ಮಾಡಿದ್ದೇವೆ ಎಂದರು.
ನಂತರ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ತೇಜಸ್ ಕಿರಣ್ ಮಾತನಾಡಿ ವಿಭಿನ್ನ ಪ್ರೇಮ ಕಥೆ ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರು ನೋಡುವಾಗ ಒಂದು ಉತ್ತಮ ಪುಸ್ತಕ ಓದಿದ ರೀತಿಯಲ್ಲಿ ಭಾಸವಾಗುತ್ತದೆ. ಶಿವಮೊಗ್ಗದ ಜನರು ಇಲ್ಲಿನ ಕಥೆ ಕಾದಂಬರಿಗಳನ್ನು ವಿಶ್ವದಾದ್ಯಂತ ಪ್ರಚಾರ ಮಾಡಿದಂತೆ ನಮ್ಮ ಚಿತ್ರವನ್ನು ಪ್ರಚಿರ ಪಡಿಸಿ ಎಂದರು.
ಈ ಚಿತ್ರವನ್ನು ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶಿಸಿದ್ದು, ಚಿತ್ರಕ್ಕೆ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿ ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾವನ್ನು ಬ್ಲಿಂಕ್ ಚಿತ್ರದ ನಿರ್ಮಾಪಕರಾದ ರವಿಚಂದ್ರ ರಾಜ್ಯದಾದ್ಯಂತ ವಿತರಣೆ ಮಾಡುತ್ತಿದ್ದು, ಶಾಖಾಹಾರಿ ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಚಿತವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ.
SUMMARY | The film’s director Mayur Ambekallu said that the film will be released across the state on February 21.
KEYWORDS | Mayur Ambekallu, bhava teera yaana, kannada movies,