ಪ್ರಿಯಕರನೊಂದಿಗೆ ತೆರಳಬೇಡ ಎಂದು ಮಗಳ ಕಾಲಿಗೆ ಬಿದ್ದ ತಂದೆ | ಕಣ್ಣಿರು ತರಿಸುವ ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 22, 2025

ಹೆತ್ತ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಬೆಳೆದ ಮೇಲೆ ಅವರನ್ನು ಒಂದು ಒಳ್ಳೆಯ ಹುಡುಗ ಅಥವ ಹುಡುಗಿಗೆ ಮದುವೆ ಮಾಡಿ ಕೊಡಬೇಕೆನ್ನುವುದು  ಕನಸಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಷ್ಟೋ  ಜನ ಮಕ್ಕಳು ತಂದೆ ತಾಯಿಯರ ವಿರೋದದ ನಡುವೆಯೂ ತಾವು ಇಷ್ಟಪಟ್ಟವರನ್ನು ಮದುವೆಯಾಗಲು ಮುಂದಾಗುತ್ತಾರೆ. ಇದರಿಂದ ತಂದೆ ತಾಯಿಯರ ಆಸೆ ಕನಸುಗಳು ನುಚ್ಚು ನೂರಾಗುತ್ತದೆ. ಅದಕ್ಕೆ ನಿದರ್ಶನ ಎಂಬಂತೆ ಅಂತಹುದ್ದೇ ಒಂದು ಘಟನೆ ಈಗ ತಮಿಳುನಾಡಿನಲ್ಲಿ ನಡೆದಿದೆ. ತಂದೆ ಮಗಳಿಗೆ ತನ್ನನ್ನು ಬಿಟ್ಟು ಹೋಗ ಬೇಡ ಎಂದು ಗೋಗರೆದರೂ ಸಹ ಮಗಳು ತಂದೆಯ ಮಾತಿಗೆ ಗೌರವ ನೀಡದೆ ಪ್ರಿಯಕರನೊಂದಿಗೆ ತೆರಳಿದ್ದಾಳೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ವಿಡಿಯೋದಲ್ಲಿರುವಂತೆ ಮಗಳೊಬ್ಬಳು ತಂದೆಯ ವಿರೋದದ ನಡುವೆ ಪ್ರಿಯಕರನೊಂದಿಗೆ ಮದುವೆಯಾಗುವುದಾಗಿ ತೆರಳುತ್ತಿರುತ್ತಾಳೆ. ಆಗ ಆಕೆಯ ತಂದೆ ನನನ್ನು ಬಿಟ್ಟು ಹೋಗಬೇಡ ಮಗಳೆ ಬಾ ಮಗಳೆ ಎಂದು ಗೋಗರೆಯತ್ತಾರೆ.  ಆದರೂ ಸಹ ಮಗಳು ತಂದೆಯ ಮಾತನ್ನು ನಿರ್ಲಕ್ಷಿಸಿ ಹೋಗುತ್ತಾಳೆ. ಆಗ ತಂದೆ ಕಣ್ಣಿರು ಹಾಕುತ್ತಾ ಆಕೆಯ ಕಾಲಿಗೆ ಬೀಳಲು ಮುಂದಾಗುತ್ತಾರೆ. ಆಗ ಮಗಳು ತಂದೆಯನ್ನು ತಡೆದು ಅವರ ಕಾಲಿಗೆ ಬಿದ್ದು ಪ್ರಿಯಕರನೊಂದಿಗೆ ತೆರಳುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಎಂತಹವರ ಕಣ್ಣಲ್ಲೂ ಸಹ ನೀರು ತರಿಸುವಂತಿದೆ.

SUMMARY | Father falls at daughter’s feet, asks her not to go with boyfriend

KEYWORDS | boyfriend, Father, viral video,

Share This Article