SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 4, 2025
ಶಿವಮೊಗ್ಗ | ಎನ್ ಎಸ್ ಎಸ್ ಹಾಗೂ ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಆಶಯದಂತೆ ಯುವ ಸಂಸತ್ ( ಯೂತ್ ಪಾರ್ಲಿಮೆಂಟ್ ) ಯುವ ಧ್ವನಿಯನ್ನು ದಾಖಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶುಭ ಮರವಂತೆ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಾರತ 2047 ರ ವೇಳೆಗೆ 1 ಲಕ್ಷ ಜಾಗೃತ ಯುವ ನಾಯಕರನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ .ದೇಶದಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಜಿಡ್ಡುಗಟ್ಟಿ ಹೋಗಿದೆ ಅದನ್ನು ಸರಿಮಾಡಲು ರಾಜಕೀಯದಲ್ಲಿ ಯುವಕರು ಭಾಗವಹಿಸಬೇಕು. ಭವಿಷ್ಯದ ಭಾರತ ಯುವಕರ ಕೈಲಿ ಹೇಗಿರಲಿದೆ ಹಾಗೆಯೇ ದೇಶದ ಬಗ್ಗೆ ಯುವಕರ ಚಿಂತನೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದುಕೊಳ್ಳಲು ನರೇಂದ್ರ ಮೋದಿಯವರ ಆಶಯದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಭಾಗವಹಿಸಲು ಇಚ್ಚಿಸುವವರು 1 ನಿಮಿಷದ ವಿಡಿಯೋ ಮಾಡಿ ಮೈಭಾರತ್ ಪೋರ್ಟ್ಲ್ನಲ್ಲಿ ಅಪ್ಲೋಡ್ ಮಾಡಬೇಕು ಎಂದರು.
ಕಾರ್ಯಕ್ರಮಕ್ಕೆ ಯಾರೆಲ್ಲಾ ಭಾಗಹಿಸಬಹುದು ವಯೋಮಿತಿ ಎಷ್ಟು
8 ರಿಂದ 25 ವರ್ಷದ ಯುವಕ ಯುವತಿಯರು ಮೈ ಭಾರತ್ ಪೋರ್ಟಲ್ ಲಿಂಕ್ ಮೇಲೆ click ಮಾಡಿ https://mybharat.gov.in/pages/event_detail?event_name=Viksiಒಂದು ನಿಮಿಷದ ನಿಮ್ಮ ಆಡಿಯೋ ವಿಡಿಯೋ upload ಮಾಡಬೇಕು ವಿಡಿಯೋ ಗರಿಷ್ಠ 25MB ಯ ಒಳಗಿರಬೇಕು.
ನನ್ನ ದೃಷ್ಟಿಯಲ್ಲಿ ವಿಕಸಿತ ಭಾರತ ಎಂಬ ವಿಷಯವನ್ನು ತೆಗೆದುಕೊಂಡು ಕನ್ನಡ ಹಿಂದಿ ಇಂಗ್ಲಿಷ್ ಯಾವುದೇ ಭಾಷೆಯಲ್ಲಿಯೂ ವಿಡಿಯೋ ಮಾಡಬಹುದು.
ವಿಡಿಯೋದ ಆರಂಭದಲ್ಲಿ ನಿಮ್ಮ ಹೆಸರು ಜಿಲ್ಲೆಯ ಹೆಸರು ರಾಜ್ಯದ ಹೆಸರು ನೊಡಲ್ ಸೆಂಟರ್ ಹೆಸರು ಹೇಳಬೇಕು. ಉದಾ : ದಿವ್ಯ ಶಿವಮೊಗ್ಗ ಜಿಲ್ಲೆ ಕರ್ನಾಟಕ ನೊಡಲ್ ಸೆಂಟರ್ ಶಿವಮೊಗ್ಗ
ವಿಡಿಯೋ upload ಮಾಡಲು ಕೊನೆಯ ದಿನಾಂಕ ಮತ್ತು ಸಮಯ ಮಾರ್ಚ್ 09 2025 ರಾತ್ರಿ 11.59 PM
ಇದರಲ್ಲಿ ಅತ್ಯುತ್ತಮ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮಾರ್ಚ್ 14-15 ರಂದು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲಾ, ನೊಡಲ್ ಸೆಂಟರ್ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಪರ್ಧೆ ನಡೆಸಲಾಗುವುದು. ಅಂದು ಬೆಳಿಗ್ಗೆ 9.30 ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಜರಿರಬೇಕು ಎಂದರು.
ನಂತರ ಇಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಇಲ್ಲಿಂದ 3 ಜನರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು, ಅಂತಿಮ ಹಂತದಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ 2ಲಕ್ಷ, ದ್ವಿತೀಯ 1.5 ಲಕ್ಷ, ತೃತೀಯ 1 ಲಕ್ಷ ನೀಡಲಾಗುವುದು, ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು *ಭಾರತದ ಸಂಸತ್ ಭವನದಲ್ಲಿ ಮಾತನಾಡುವ ಅವಕಾಶ ಪಡೆಯುತ್ತಾರೆ ಎಂದರು.
SUMMARY | Dr. Shubha Maravanthe said that as per the wishes of Prime Minister Narendra Modi, the Youth Parliament in partnership with NSS and Nehru Yuva Kendra is organizing a programme to document the youth voice.
KEYWORDS | Dr. Shubha Maravanthe, Youth Parliament, Narendra Modi,