SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 30, 2024
ಶಿವಮೊಗ್ಗದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇವತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರರ ನೇತೃತ್ವದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಅಸ್ವಸ್ಥಗೊಂಡರು. ತಕ್ಷಣವೇ ಅವರ ನೆರವಿಗೆ ಧಾವಿಸಿದ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಹಾಗೂ ಡಿಹೆಚ್‌ಒ ಡಾ. ನಟರಾಜ್ ಅಧಿಕಾರಿಯವರ ಆರೋಗ್ಯ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿಯವರ ಆರೋಗ್ಯದಲ್ಲಿ ಏರುಪೇರಾಯ್ತು. ತಕ್ಷಣ ವೇದಿಕೆಯಲ್ಲಿದ್ದ ಸಚಿವರು, ಜಿಲ್ಲಾಧಿಕಾರಿಗಳು ಅಧಿಕಾರಿ ಕಾವೇರಿಯವರ ಬಳಿಗೆ ದೌಡಾಯಿಸಿದರು. ಅದೇ ಹೊತ್ತಿಗೆ ಅಲ್ಲಿಯೇ ಕುಳಿತಿದ್ದ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಕಾವೇರಿಯವರ ಬಳಿಗೆ ತೆರಳಿ ಅವರ ಆರೋಗ್ಯ ಪರಿಶೀಲಿಸಿದರು.
ಕೆಲವು ಹೊತ್ತು ಸ್ಥಳದಲ್ಲಿಯೆ ಸುಧಾರಿಸಿಕೊಂಡ ಕಾವೇರಿಯವರು ಆ ಬಳಿಕ ಸಭಾಂಗಣದಿಂದ ಹೊರಕ್ಕೆ ತೆರಳಿದರು. ಬಳಿಕ ಜಿಲ್ಲಾಧಿಕಾರಿ ಗುರುದತ್ ಹೆಗೆಡೆ ಕಾವೇರಿಯವರು ಆರಾಮಾಗಿದ್ದಾರೆ ಎಂದು ಸಭೆಗೆ ತಿಳಿಸಿದರು.
SUMMRY| A quarterly progress review meeting was held under the chairmanship of District In-charge Minister Madhu Bangarappa at Abdul Nazeer Saab Auditorium in Shivamogga Zilla Panchayat premises here today. An officer who attended the meeting fell ill.
KEYWORDS| Abdul Nazeer Saab Auditorium in Shivamogga, Zilla Panchayat, dr dananjaya sarji, kannadanews,