ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಮೈತ್ರಿ ಆಯ್ತಾ? | ಬಣ ಬಣದ ನಡುವೆ ಅವಿರೋಧ ಆಯ್ಕೆ!
Shimoga district State Government Employees Association , president, secretary, treasurer , state council member, CS Shadakshari, Madhu Bangarappa
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024
ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯಲ್ಲಿನ ಚುನಾವಣೆ ಹೊಸ ಹೊಸ ಅಚ್ಚರಿಗಳನ್ನ ಮೂಡಿಸುತ್ತಲೇ ಇದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಸಿಎಸ್ ಷಡಾಕ್ಷರಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಬಣದ ಪ್ರತಿಷ್ಟೆಯ ಕಣವಾಗಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಸಿಎಸ್ ಷಡಾಕ್ಷರಿ ಬಣ ಪ್ರಾಬಲ್ಯ ಸಾಧಿಸಿತ್ತು. 38 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದ ಬಳಿಕ ನಡೆದ 28 ಸ್ಥಾನಗಳ ಚುನಾವಣೆಯಲ್ಲಿಯು ಸಿಎಸ್ ಷಡಾಕ್ಷರಿ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಈ ನಡುವೆ ಇದೀಗ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿದೆ.
ಯಾರ್ಯಾರು ಯಾವ ಸ್ಥಾನ?
-
ಜಲಸಂಪನ್ಮೂಲ ಇಲಾಖೆ ನೌಕರ ಆರ್.ಮೋಹನ್‌ಕುಮಾರ್ ಜಿಲ್ಲಾ ಅಧ್ಯಕ್ಷರು
-
ಶಿವಮೊಗ್ಗ ಉಪವಿಭಾಗಾಧಿಕಾರಿ ಜಿ.ಎಚ್.ಸತ್ಯನಾರಾಯಣ ಖಜಾಂಚಿ
-
ನ್ಯಾಯಾಂಗ ಇಲಾಖೆಯ ಆರ್.ಪಾಪಣ್ಣ ಕಾರ್ಯದರ್ಶಿ
-
ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಎನ್.ಎಂ.ರಂಗನಾಥ್ ರಾಜ್ಯ ಪರಿಷತ್ ಸದಸ್ಯ
-
ಸೈನಿಕ ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಕಾರ್ಯಾಧ್ಯಕ್ಷರು
-
ಸಹಕಾರ ಇಲಾಖೆಯ ನರಸಿಂಹಮೂರ್ತಿ ಗೌರವಾಧ್ಯಕ್ಷರು
-
ಶಿಕ್ಷಣ ಇಲಾಖೆಯ ಎಂ.ರವಿ, ಕೆ.ಎ. ದಿನೇಶ್ ಹಾಗೂ ಸುಮತಿ ಹಿರಿಯ ಉಪಾಧ್ಯಕ್ಷರು
ವಿಶೇಷ ಅಂದರೆ, ಷಡಾಕ್ಷರಿ ಪ್ರಾಬಲ್ಯದ ನಡುವೆ ಸಚಿವರ ಬಣದವರು ಎನ್ನಲಾದ ಆರ್ ಮೋಹನ್ ಕುಮಾರ್ ಅಧ್ಯಕ್ಷರಾಗಿರುವುದು ತೀವ್ರ ಕುತೂಹಲಕ್ಕೂ ಎಡೆಮಾಡಿಕೊಟ್ಟಿತ್ತು. ಆದಾಗ್ಯು ಅವಿರೋಧ ಆಯ್ಕೆ ಸರ್ಕಾರಿ ಸಂಘದ ಒಗ್ಗಟ್ಟನ್ನು ಸಾಕ್ಷಿಕರಿಸಿದೆ. ಇನ್ನೂ ಈ ಸಂಬಂಧ ಚರ್ಚೆಗಳು ಮುಂದುವರಿದಿದ್ದು, ಇದು ಸಮ್ಮಿಶ್ರ ಸಂಘ, ಮೈತ್ರಿ ಆಡಳಿತ ಎಂಬ ಮಾತುಗಳು ಕೇಳಿಬರುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಒಗ್ಗಟ್ಟಿನಿಂದ ಮುಂದುವರಿಯಿರಿ ಎಂಬ ಸಚಿವರ ಮಧ್ಯಸ್ಥಿಕೆ ಎಲ್ಲದಕ್ಕೂ ಕಾರಣವಾಯಿತು ಎಂಬ ವಿಚಾರ ನೌಕರರ ವಲಯದಲ್ಲಿ ಕೇಳಿ ಬರುತ್ತಿದೆ.
SUMMARY | Shimoga district branch of the State Government Employees' Association has been elected to the posts of president, secretary, treasurer and state council member. CS Shadakshari, Madhu Bangarappa
KEY WORDS | Shimoga district State Government Employees Association , president, secretary, treasurer , state council member, CS Shadakshari, Madhu Bangarappa