ಪೊಲೀಸ್ ನೇಮಕಾತಿಯ ವೇಳೆ ಕುಸಿದು ಬಿದ್ದು ಅಭ್ಯರ್ಥಿ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 3, 2025

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿ ವೇಳೆ ಗುರುವಾರ ನಡೆದ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬರು ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೃಷ್ಣ ಜಿಲ್ಲೆಯ ಎ ಕೊಂಡೂರು ಗ್ರಾಮದ 25 ವರ್ಷದ ಎನ್ ಚಂದ್ರಶೇಖರ್ ಮೃತ ಅಭ್ಯರ್ಥಿ 

ಉದ್ಯೋಗ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಆಂಧ್ರ ಪ್ರದೇಶ ರಾಜ್ಯ ಮಟ್ಟದ ನೇಮಕಾತಿ ಮಂಡಳಿಯು ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ.  ಕೃಷ್ಣ ಜಿಲ್ಲೆಯ ಅಭ್ಯರ್ಥಿಗಳಿಗೆ ಪೊಲೀಸ್ ಪರ್ಲ್ಸ್ ಮೈದಾನ, ಲಕ್ಷ್ಮೀ ಟಾಕೀಸ್ ಸೆಂಟರ್ನಲ್ಲಿ ದೈಹಿಕ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಹಿನ್ನಲೆ ಪೋಲೀಸ್ ದೈಹಿಕ ಪರೀಕ್ಷೆಯಲ್ಲಿ 1600 ಮೀಟರ್ ಓಟದ ಸ್ಪರ್ದೆಯಲ್ಲಿ ಓಡುತ್ತಿದ್ದ ವೇಳೆ ಚಂದ್ರಶೇಖರ್ ಒಮ್ಮೆಲೆ  ಬಿದ್ದಿದ್ದಾರೆ.  ಆ ಕೂಡಲೇ ಅವರನ್ನು ಮಚಲಿಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ,  ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾರೆ.

SUMMARY | A candidate died after falling into the physical ability test held during the recruitment of a police constable in Andhra Pradesh’s Krishna district on Thursday

 

KEYWORDS | candidate died,  police constable, Andhra Pradesh,

Share This Article