SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 5, 2024
ಹೈದರಬಾದ್ | ನಿನ್ನೆ ರಾತ್ರಿಯಿಂದಲೇ ವಿಶ್ವದಾದ್ಯಂತ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಹಾಗೆಯೇ ಸಾವಿರಾರು ಜನ ಅಲ್ಲು ಅರ್ಜುನ್ ಅಭಿಮಾನಿಗಳು ಚಿತ್ರ ನೋಡಲು ಥಿಯೇಟರ್ಗೆ ಮುಗಿ ಬೀಳುತ್ತಿದ್ದಾರೆ. ಇದರ ನಡುವೆ ದೊಡ್ಡ ಅವಘಡವೊಂದು ಸಂಭವಿಸಿದೆ. ಅದೇನೆಂದರೆ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಹೈದರಬಾದ್ ನ ಚಿಕ್ಕಡ್ಪಲ್ಲಿಯ ಥಿಯೇಟರ್ನಲ್ಲಿ ಜನರ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಹಾಗೆಯೇ ಆಕೆಯ 12 ವರ್ಷದ ಮಗ ಸಹ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಅವರ ಮಗ ಶ್ರೀ ತೇಜಾನನ್ನು ಆಂಬ್ಯುಲೆನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ತಡರಾತ್ರಿಯೇ ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ. ರೇವತಿ ತನ್ನ ಪತಿ ಹಾಗು ಮಗನೊಂದಿಗೆ ರಾತ್ರಿಯ ಪ್ರೀಮಿಯರ್ ಶೋ ಗೆ ಆಗಮಿಸಿದ್ದರು. ಆ ವೇಳೆ ಇವರು ಹೋಗಿದ್ದ ಥಿಯೇಟರ್ಗೆ ಕೆಲ ಸ್ಟಾರ್ ನಟರು ಬಂದಿದ್ದರು. ಅವರನ್ನು ನೋಡಲು ಅಲ್ಲಿ ನೂಕು ನುಗ್ಗಲು ಆಗಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
SUMMARY| A woman died after being trampled to death by people at a theatre in Chikkadpally in haydarbad.
KEYWORDS| pushpa 2, haydarbad, woman died,