SHIVAMOGGA | MALENADUTODAY NEWS | ಮಲೆನಾಡು ಟುಡೆ
ಅಲ್ಲೂ ಅರ್ಜುನ್ ನಟನೆಯ ಬಹು ನಿರೀಕ್ಷಿತ ಪುಷ್ಪ 2 ಚಿತ್ರದ ಟ್ರೈಲರ್ ನವೆಂಬರ್ 17 ಸಂಜೆ 6:03 ಕ್ಕೆ ರಿಲೀಸ್ ಆಗಲಿದೆ.
ಈ ಕುರಿತು ಚಿತ್ರತಂಡ ತನ್ನ ಅಧಿಕೃತ ಟೈಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ.
ಈ ಹಿಂದೆ ಅಲ್ಲೂ ಅರ್ಜುನ್ ನಟಿಸಿದ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಗೆಯೇ ಈ ಚಿತ್ರದಲ್ಲಿ ಅಲ್ಲೂ ಅರ್ಜುನ್ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು.
ಈ ಹಿಂದೆ ಅಲ್ಲೂ ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಸಣ್ಣದೊಂದು ಟೀಸರ್ ಬಿಟ್ಟಿತ್ತು. ಅದರಲ್ಲಿ ಅಲ್ಲೂ ಅರ್ಜುನ್ ಲುಕ್ ಹಾಗು ಚಿತ್ರದ ಬಿಜೀಮ್ ಗೆ ಅಲ್ಲೂ ಅಭಿಮಾನಿಗಳು ಖುಷ್ ಆಗಿದ್ದರು.
ಇನ್ನು ಈಗ ಪುಷ್ಪ 2 ಚಿತ್ರದ ಟ್ರೈಲರ್ ರಿಲೀಸ್ ಅಗಲಿದ್ದು. ಸಿನಿಮಾದ ಕ್ವಾಲಿಟಿ ಹೇಗಿರಲಿದೆ ಎಂದು ತಿಳಿದುಕೊಳ್ಳಲು ಅಲ್ಲೂ ಅಭಿಮಾನಿಗಳು ಕಾತುರದಿಂದ ಕಾದುಕುಳಿತಿದ್ದಾರೆ
ಈ ಚಿತ್ರಕ್ಕೆ ಎಸ್ ಸುಕುಮಾರ್ ರವರ್ ನಿರ್ದೇಶನವಿದ್ದು, ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಲಿದ್ದಾರೆ. ಈ ಚಿತ್ರ ಡಿಸೆಂಬರ್ 5 ಕ್ಕೇ ವಿಶ್ವಾದ್ಯಂತ ರಿಲೀಸ್ ಆಗಲಿದೆ