SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
ಅಲ್ಲುಅರ್ಜುನ್ ನಟಿಸಿದ್ದ ಬ್ಲಾಕ್‌ಬಸ್ಟರ್ ಪುಷ್ಪ 2 ಚಿತ್ರ ಇದೀಗ ಜನವರಿ 30ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.
ಪುಷ್ಟ 2 ಚಿತ್ರ ವಿಶ್ವದಾದ್ಯಂತ ಡಿಸೆಂಬರ್ 5 ರಂದು ರಿಲೀಸ್ ಆಗಿ ಇದುವರೆಗೆ 1800 ಕೋಟಿಯವರೆಗೆ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಪುಷ್ಪಾ 2 ಚಿತ್ರದ ಮೇಕಿಂಗ್ ಅಲ್ಲು ಅರ್ಜುನ್ ಆಕ್ಟಿಂಗ್ ಹಾಗೂ ಸುಕುಮಾರ್ ನಿರ್ದೇಶನಕ್ಕೆ ಸಿನಿಪ್ರಿಯರು ಬಹುಪರಾಕ್ ಎಂದಿದ್ದರು. ಈ ಹಿಂದೆ ಪುಷ್ಪ 1 ಚಿತ್ರ ಬ್ಲಾಕ್ಬಸ್ಟರ್ ಹಿಟ್ಟಾಗಿತ್ತು. ಅದರ ನಂತರ ಪುಷ್ಪ 2 ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆ ನಿರೀಕ್ಷೆಯನ್ನು ಚಿತ್ರತಂಡ ಹುಸಿ ಮಾಡದೆ ಉತ್ತಮ ಚಿತ್ರಕಥೆಯನ್ನು ಕಟ್ಟಿಕೊಟ್ಟು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಇದೀಗ ಈ ಪುಷ್ಪಾ ಚಿತ್ರವನ್ನು ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್ ಬರೊಬ್ಬರಿ 275 ಕೋಟಿ ಹಣ ಕೊಟ್ಟು ಖರೀದಿಸಿದೆ. ಜನವರಿ 30 ರಂದು ಎಲ್ಲ ಭಾಷೆಗಳಲ್ಲಿ ಪುಷ್ಪ2 ಚಿತ್ರ ರಿಲೀಸ್ ಆಗುತ್ತಿದ್ದು, ಸಿನಿಪ್ರಿಯರು ಮನೆಯಲ್ಲಿಯೇ ಕುಳಿತುಕೊಂಡು ಚಿತ್ರವನ್ನು ವೀಕ್ಷಿಸಬಹುದು.
SUMMARY | Allu Arjun blockbuster Pushpa is all set to release on Netflix on January 30.
KEYWORDS | Allu Arjun, Pushpa2, Netflix, January 30,