ಪುಟ್ಟ ಬಾಲಕನನ್ನ ಬಲಿ ಪಡೆದ ಬೀದಿನಾಯಿಗಳು

Malenadu Today

ಬೀದಿ ನಾಯಿ ಕಡಿತಕ್ಕೆ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ. ಸೈಯದ್ ಮದನಿ (4 ವರ್ಷ) ಸಾವನ್ನಪ್ಪಿದ ಬಾಲಕ

ಬಾಲಕನ ತಂದೆ ಮನೆ ಸನಿಹದ ಭತ್ತದ ಗದ್ದೆಗೆ ಭತ್ತ ಕೀಳಲು ತೆರಳಿದ್ದರು. ತಂದೆಯಳೆನ್ನು ಹಿಂಬಾಲಿಸಿಕೊಂಡು ಬಾಲಕಿ ಸೈಯದ್ ಮದನಿ ಮನೆಯಿಂದ ಹೊರಟಿದ್ದ ಅಷ್ಟೆ.

ಅಷ್ಟರಲ್ಲಾಗಲೇ ಎಂಟರಿಂದ ಹತ್ತು ಬೀದಿನಾಯಿಗಳು ಯಮಸ್ವರೂಪಿಯಂತೆ ಮದನಿ ಮೈ ಕೈ ಕಾಲುಗಳಿಗೆ ಕಚ್ಚಿವೆ. ತೀವ್ರ ಗಾಯಗೊಂಡ ಮಗನನ್ನು

ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಸಂದರ್ಭದಲ್ಲಿ ಬಾಲಕ ಸೈಯದ್ ಮದನಿ ಕೊನೆಯುಸಿರೆಳೆದಿದ್ಧ. ನಾಯಿಗಳ ಹಾವಳಿಗೆ ಬಾಲಕ ಮೃತ ಪಟ್ಟಿರುವುದಕ್ಕೆ ಗ್ರಾಮದಲ್ಲಿ ತೀವೃ ಆಕ್ರೋಶ ವ್ಯಕ್ತವಾಗಿದೆ. ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article