SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 21, 2025
ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ ವ್ಯಾಪಾರಿ ಹಾಗೂ ಗ್ರಾಹಕನ ನಡುವೆ ಗಲಾಟೆ ನಡೆದಿದ್ದು, ಗ್ರಾಹಕನು ಪಾನಿಪುರಿ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಸ್ಥಳೀಯರು ಇ ಆರ್ ವಿ ಪೊಲೀಸರಿಗೆ ಮಾಹಿತಿ ನೀಡಿದ್ದು ಇ ಆರ್ ವಿ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಇಬ್ಬರನ್ನು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರು ಪಡಿಸಿದ್ದಾರೆ.
ಸುದ್ದಿ : 02 ಫೆಬ್ರವರಿ 23 ರಂದು ನೂತನ ಸಹಕಾರ ಸಂಘದ ಉದ್ಘಾಟನಾ ಸಮಾರಂಭ
ಶಿವಮೊಗ್ಗ : ತಾಲ್ಲೂಕು ಮಾದಾರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 22 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಸಂಘದ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಪ್ರವರ್ತಕ ಗುತ್ಯಪ್ಪ ಗಾಮ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ : 03 ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ನಿಯಮಿತ ಉಪಾಧ್ಯಕ್ಷರಾಗಿ ಸೂರ್ಯನಾರಾಯಣ ಕೆ.ಎಂ.ಆಯ್ಕೆ
ಕೆ ಎಂ ಸೂರ್ಯನಾರಾಯಣರವರು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳಿ ನಿಯಮಿತ, ಶಿವಮೊಗ್ಗದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಮುಖ್ಯಕಾರ್ಯನಿರ್ವಹಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ : 04 ವಿಧ್ಯಾರ್ಥಿಗಳು ಯಶ್ವಿಯಾಗಿ ಪರೀಕ್ಷೆ ಬರೆಯಲು ಫೆಬ್ರವರಿ 23 ರಂದು ನೀಲಸರಸ್ವತೀ ಹೋಮ
ಶಿವಮೊಗ್ಗ ತಾಲೂಕಿನ ಕೂಡಲೀ ಕ್ಷೇತ್ರದ ವಿದ್ಯಾಧಿ ಆದಿ ದೇವತೆ ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಭಕ್ತರಿಗೆ ಹಾಗೂ ವಿದ್ಯಾರ್ಥಿಗಳ ಯಶಸ್ಸು, ಪರೀಕ್ಷೆಗಳನ್ನ ಎದುರಿಸಲು ಧೈರ್ಯ ತುಂಬುವ ಸಲುವಾಗಿ ಪ್ರತಿ ತಿಂಗಳ ಮೂಲ ನಕ್ಷತ್ರದ ದಿನದಂದು ಕ್ಷೇತ್ರದಲ್ಲಿ ನೀಲಸರಸ್ವತೀ ಹೋಮ ವನ್ನು ಸಾಮೂಹಿಕವಾಗಿ ಮಾಡಬೇಕೆಂದು ನಿಶ್ಚಯ ಮಾಡಲಾಗಿದೆ. ಇದೇ ಫೆಬ್ರವರಿ 23 ರಂದು ಕ್ಷೇತ್ರದಲ್ಲಿ ನೀಲಸರಸ್ವತೀ ಹೋಮ ಹಮ್ಮಿಕೊಳ್ಳಲಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀಮದ್ ಜಗದ್ಗುರು ಶ್ರೀ ಕೂಡಲೀ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ವ್ಯವಸ್ಥಾಪಕ ರಮೇಶ ಹುಲಿಮನೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ
ಸುದ್ದಿ : 05 ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಾರ್ತಿಕ್ ಎಸ್ ಹಿರೇಮಠ್
2025ನೇ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ 6ನೇ ವರ್ಷದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಂದಿಪಿನಿ ಇಂಗ್ಲೀಷ್ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿರುವ ಕಾರ್ತಿಕ್ ಎಸ್ ಹಿರೇಮಠ್ ಪ್ರಥಮ ಸ್ಥಾನ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
SUMMARY | A panipuri trader was allegedly assaulted by a customer over a petty issue in Vinoba Nagar police station limits.
KEYWORDS | panipuri trader, customer, petty issue, Vinoba Nagar, chut pat news,