SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 24, 2024
ಶಿವಮೊಗ್ಗ | ಪದವೀಧರರ ಸಹಕಾರ ಸಂಘದ ಸದಸ್ಯರ ಅನೂಕೂಲಕ್ಕಾಗಿ ಕೃಷಿ ನಗರದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿಸುತ್ತಿದ್ದು, ಅದರಲ್ಲಿ ರಾಜ್ಯದ ದೊಡ್ಡ ಲಾಕರ್ ಪ್ಲಾಝಾವನ್ನು ನಿರ್ಮಿಸುತ್ತಿದ್ದೇವೆ ಎಂದು ಪದವೀಧರ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ಪಿ ದಿನೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪದವೀಧರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಶಿವಮೊಗ್ಗದ ಕೃಷಿನಗರದಲ್ಲಿ ಜಾಗವನ್ನು ಕೊಂಡುಕೊಂಡು 40*60 ಜಾಗದಲ್ಲಿ 4 ಅಂತಸ್ಥಿನ ನೂತನ ಪದವೀಧರ ಸಹಕಾರ ಸಂಘದ ಕಟ್ಟಡವನ್ನು ನಮ್ಮ ಸದಸ್ಯರ ಅನುಕೂಲಕ್ಕಾಗಿ ನಿರ್ಮಿಸುತಿದ್ದೇವೆ. ಅದರಲ್ಲಿ ರಾಜ್ಯದಲ್ಲಿಯೇ ಬಹುದೊಡ್ಡ ಲಾಕರ್ ಪ್ಲಾಝಾವನ್ನು ನಿರ್ಮಾಣ ಮಾಡಿತ್ತಿದ್ದೇವೆ. ಹಿರಿಯರು ಹಾಗೂ ಇನ್ನಿತರರು ತಮ್ಮ ದಾಖಲೆ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ತಂದು ಸುರಕ್ಷಿತವಾಗಿ ಈ ಲಾಕರ್ ನಲ್ಲಿ ಇಡಬಹುದು. ಆ ದೃಷ್ಠಿಯಿಂದ ಈ ಲಾಕರ್‌ನ್ನು ನಿರ್ಮಾಣ ಮಾಡಿದ್ದೇವೆ. ಈ ಕಟ್ಟಡ ಮೊದಲನೆ ಅಂತಸ್ತಿನಲ್ಲಿ ಲಾಕರ್ ಪ್ಲಾಝಾ ಇರಲಿದೆ, 2 ಅಂತಸ್ತಿನಲ್ಲಿ ಸದಸ್ಯರ ಶಾಖಾ ಕಚೇರಿ ಹಾಗೂ ಹಾಗೆಯೇ ಅಂತಸ್ಥಿನಲ್ಲಿ ಅಥಿತಿ ಗೃಹ ಇರಲಿದ್ದು, ಕೊನೆಯ ಅಂತಸ್ತಿನಲ್ಲಿ ಕಾರ್ಯಕ್ರಮದ ಕೊಠಡಿಯನ್ನು ನಿರ್ಮಾಣ ಮಾಡುತ್ತಿದೇವೆ. ಅದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್‌ನ್ನು ತೆರೆಯಲು ಚಿಂತಿಸಿದ್ದೇವೆ. ಈ ಕಾರ್ಯಕ್ರಮದ ಕೊಠಡಿ 80 ರಿಂದ 100 ಜನ ಕೂರುವ ಸಾಮರ್ಥ್ಯ ಹೊಂದಿದೆ ಎಂದರು.

ಈ ಕಟ್ಟಡವು ಈಗ ನಿರ್ಮಾಣ ಹಂತದಲ್ಲಿದ್ದು ಮುಂದಿನ 5 ರಿಂದ 6 ತಿಂಗಳ ಒಳಗೆ ಸದಸ್ಯರ ಸೇವೆಗೆ ಸಿದ್ದವಾಗಲಿದೆ. ಈ ಕಟ್ಟಡ ನಿರ್ಮಾಣಕ್ಕೆ 2 ಕೋಟಿ 69 ಲಕ್ಷ ರೂಪಾಯಿಗಳಷ್ಟು ಖರ್ಚಾಗಲಿದೆ ಎಂದರು. ಹಾಗೆಯೇ ಈ ಬಾರಿಯ ಪದವೀಧರ ಸಹಕಾರ ಸಂಘದ ಚುನಾವಣೆ ಮುಂದಿನ ಜನವರಿಯಲ್ಲಿ ನಡೆಯಲಿದೆ. ಈ ಹಿಂದಿನ 5 ವರ್ಷದ ಅವದಿ ನಮಗೆ ಸುವರ್ಣಯುಗ ಏಕೆಂದರೆ ಆ ಸಂದರ್ಭದಲ್ಲಿಯೇ ನಮ್ಮ ಪದವೀಧರರ ಸಹಕಾರ ಸಂಘ ಸುವರ್ಣ ಮಹೋತ್ಸವ ಆಚರಿಸಿದ್ದು ಎಂದರು. ನಮ್ಮ ಸಹಕಾರ ಸಂಘ ದಾಖಲೆಯ 219.49 ಕೋಟಿ ರೂಪಾಯಿಗಳ ದಾಖಲೆಯ ವಹಿವಾಟು ನಡೆಸಿದೆ ಎಂದರು.
ಈ ಸಂದರ್ಭದಲ್ಲಿ ಪದವೀಧರ ಸಹಕಾರ ಸಂಘದ ಕ್ಯಾಲೆಂಡರ್ ಹಾಗೂ ಟೇಬಲ್ ಕ್ಯಾಲೆಂಡರ್ ಅನ್ನು ಬಿಡುಡೆಗೊಳಿಸಲಾಯಿತು. ಕ್ಯಾಲೆಂಡರ್‌ನ್ನು ಪದವೀಧರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಂ ಶಂಕರ್‌ರವರು ಬಿಡುಗಡೆಗೊಳಿಸಿದರು. ಟೇಬಲ್ ಕ್ಯಾಲೆಂಡರ್‌ನ್ನು ಎಸ್ ಪಿ ಗುರುದತ್ ಬಿಡುಗಡೆಗೊಳಿಸಿದರು.
SUMMARY | SP Dinesh, president of the Graduates’ Co-operative Society, said that for the convenience of the members of the graduates’ co-operative society, a new building is being constructed in Krishi Nagar in which the largest locker plaza in the state is being constructed.
KEYWORDS | SP Dinesh, Graduates, Co-operative Society, shivmogga,