SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 7, 2025
ಶಿವಮೊಗ್ಗ | ಮಳೆ ಬರುವ ಮೊದಲು ಗುಡುಗು ಸಿಡಿಲು ಬರುವಂತೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿರುವ ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ಸಂಘಟನೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಹುಲಿ ಒಂದು ಹೆಜ್ಜೆ ಹಿಂದೆ ಹಾಕಿದೆ ಅಂದ್ರೆ ಅದು ರಭಸವಾಗಿ ಮುಂದೆ ಬರುತ್ತದೆ ಎಂದರ್ಥ ಎಂದು ಸಂಘಟನೆಯನ್ನು ಹುಲಿಗೆ ಹೋಲಿಸಿದರು.ನಾವು ಪ್ರತಿ ಪಕ್ಷವಾಗಿ ಸಂಘಟನೆ ಬಲಪಡಿಸಬೇಕಾಗಿತ್ತು ಮುಂದೆ ಸಂಘಟನೆ ಸರಿಪಡಿಸಿಕೊಂಡು ಹೋಗುತ್ತೇವೆ. ಪಕ್ಷದಲ್ಲಿ ಯಾರು ಸಹ ಅಸಮರ್ಥರಿಲ್ಲ ಎಲ್ಲರು ಸಮರ್ಥರಿದ್ದಾರೆ.ಕೇಂದ್ರದ ನಾಯಕರು ಮುಂದೆ ಸಂಬಂಧಪಟ್ಟ ಎಲ್ಲರನ್ನೂ ಕರೆದು ತಿಳಿಹೇಳಿ ಎಲ್ಲರೂ ಒಟ್ಟಾಗಿ ಹೋಗಲು ತಿಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ
ನಮ್ಮ ಆಡಳಿತದಲ್ಲಿ ಬಡವರು ರಾಜ್ಯದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದುಸಿ ಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದ್ರೆ ಇವರ ಆಡಳಿತದಲ್ಲಿ 12 ಲಕ್ಷಕ್ಕೂ ಅಧಿಕ ಪಡಿತರ ರದ್ದಾಗಿದೆ. ಇದರಿಂದ ಬಡವರು ತೂಂಂದ್ರೆಗೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
SUMMARY | Leader of Opposition in the Legislative Council Kota Srinivas Poojary opined that all the problems in the party will be resolved in the coming days like thunderstorms before the rains.
KEYWORDS | Kota Srinivas Poojary, bjp, politics,