SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 14, 2024
ಶಿವಮೊಗ್ಗ| ಪಂಚಮಸಾಲಿ ಜನಾಂಗದವರು 2ಎ ಮೀಸಲಾತಿಗಾಗಿ ಬೇಡಿಕೆ ಇಟ್ಟಿದ್ದನ್ನು ವಿರೋದಿಸಿ ಶಿವಮೊಗ್ಗದ ಅಹಿಂದಾ ಚಳುವಳಿ ಸಂಘಟನೆ ಇದೆ ಡಿಸೆಂಬರ್ 18 ರಂದು 11 ಗಂಟೆಗೆ ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಿದೆ. ಈ ಕುರಿತು ಅಹಿಂದ ಚಳುವಳಿಯ ಸಂಘಟನೆ ಮತ್ತು ಹಿಂದುಳಿದ ಜನಜಾಗೃತಿ ವೇದಿಕೆಯ ಶಿವಮೊಗ್ಗದ ಗೌರವ ಅಧ್ಯಕ್ಷ ರಾಜಪ್ಪ ತಿಳಿಸಿದರು.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಸ್ತುತ 3 ಬಿ ಗ್ರೂಪ್ ನಲ್ಲಿರುವ ಪಂಚಮಸಾಲಿ ಜನಾಂಗದವರು ಶೇಕಡಾ 5 ರಷ್ಟು ಮೀಸಲಾತಿ ವ್ಯಾಪ್ತಿಗೆ ಒಳಪಟಿದ್ದು, ಅದರ ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಉತ್ತಮವಾಗಿ ಗುರುತಿಸಿಕೊಂಡಿದ್ದಾರೆ, ಇದರ ನಡುವೆ ಸರ್ಕಾರದ ಬಳಿ 2ಎ ಮೀಸಲಾತಿ ನೀಡಿ ಎಂದು ಕೇಳಿರುವುದು ಖಂಡನೀಯ.ಇವರು ಕೇಳುತ್ತಿರುವ ಈ ಮೀಸಲಾತಿಯಿಂದ ಅಗಸ, ಕುಂಬಾರ, ಈಡಿಗ, ಕುರುಬ, ದೇವಾಡಿಗ, ಸೇರಿದಂತೆ 2ಎ ಗೆ ಸೇರುವ ಒಟ್ಟು 102 ಜಾತಿಗಳ ಮೀಸಲಾತಿಗೆ ಸಿಗುವ ಸಣ್ಣ ಪುಟ್ಟ ಸೌಲಭ್ಯಗಳು ಸಿಗುವುದಿಲ್ಲ. ಪಂಚಮಸಾಲಿ ಜನಾಂಗದವರು ಎಂಎಲ್‌ಎ,ಎಂಪಿ, ಎಂಎಲ್‌ಸಿ ಮುಂತಾದ ಸ್ಥಳೀಯ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಾತಿನಿದ್ಯ ಪಡೆದಿದ್ದಾರೆ, ಆದರೆ ಇಷ್ಟು ಪ್ರಾತಿನಿಧ್ಯ 2ಎ ಗುಂಪಿನಲ್ಲಿರುವ 102 ಜಾತಿಗಳಿಗೆ ಸಿಗಲಿಲ್ಲ. ಪಂಚಮ ಸಾಲಿಯವರು ಸ್ವಾಮೀಜಿ ಹೆಸರು ಇಟ್ಟುಕೊಂಡು ಬೀದಿ ರಂಪಾಟ ಮಾಡುತ್ತಿದ್ದಾರೆ. 2 ಎ ಗ್ರೂಪ್‌ನಲ್ಲಿರುವ 102 ಜಾತಿಗಳಿಗೆ ತೊಂದರೆಯಾಗಬಾರದೆಂಬುವ ಉದ್ದೇಶದಿಂದ ಇದೆ ಡಿಸೆಂಬರ್ 18 ರಂದು ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
ಯಾವುದೇ ಒಂದು ಜಾತಿಯನ್ನು ಹಿಂದುಳಿದ ಜಾತಿಗಳ ಮೀಸಲಾತಿಗೆ ಸೇರಿಸಲಾಗುವ ಪ್ರಕ್ರಿಯೆ ಹಿಂದುಳಿದ ಆಯೋಗ ಮಾಡುವ ಶಿಫಾರಸ್ಸಿನ ಆಧಾರದ ಮೇಲೆಯೇ ಹೊರತು ಸರ್ಕಾರದ ವತಿಯಿಂದ ಆಗುವ ಕೆಲಸವಲ್ಲ. ಸಂವಿಧಾನದ 340 ರ ಪರಿಚ್ಛೇದ ಈ ಅಂಶವನ್ನು ಸ್ಪಷ್ಟಪಡಿಸುತ್ತದೆ ಜೊತೆಗೆ ಕರ್ನಾಟಕದಲ್ಲಿ ನೇಮಕವಾಗಿರುವ ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳು ಪಂಚಮಸಾಲಿ ಜನಾಂಗವನ್ನುಹಿಂದುಳಿದ ಜನಾಂಗ ಎಂದು ಪರಿಗಣಿಸುವುದಿಲ್ಲ. ಅಲ್ಲದೆ ಕಳೆದ ಸಾಲಿನಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ಪ್ರಸ್ತುತ ಬಿಜೆಪಿ ಸರ್ಕಾರ ಪಂಚಮಸಾಲಿ ಬೇಡಿಕೆಯನ್ನು ನಿರಾಕರಿದ್ದವು ಎಂದರು.
SUMMARY | The Ahinda Andolana Sangathan in Shivamogga will hold a protest from Science Maidan to the Deputy Commissioner’s office at 11 am on December 18 to protest against the demand for 2A reservation by the Panchamasali community.
KEYWORDS | protest, Ahinda Andolana Sangathan, Deputy Commissioner’s office, shivamogga,