SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 10, 2025
ಶಿವಮೊಗ್ಗ| ನಿವೇಶನ ರಹಿತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಕೊಡುವಂತೆ ಹಾಗೂ ಕುಡಿಯುವ ನೀರಿಗಾಗಿ ಹೊಸದಾಗಿ ಒಂದು ಕೊಳವೆ ಬಾವಿ ನಿರ್ಮಿಸಿ ಕೊಡುವಂತೆ ಕೋರಿ ಹಸುಡಿ ಫಾರಂ ಹಾಗೂ ಅಮರಾವತಿ ಕ್ಯಾಂಪ್ ಹಸುಡಿ ಗ್ರಾಮ ಶಿವಮೊಗ್ಗ ತಾಲ್ಲೂಕು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮ ವ್ಯಾಪ್ತಿಯಲ್ಲಿ ಹಸುಡಿ ಫಾರಂ ಸರ್ವೇ ನಂಬರ್ 135 ಮತ್ತು ಸರ್ವೇ ನಂಬರ್ 111ರಲ್ಲಿ ಸರ್ಕಾರಿ ಜಾಗ ಲಭ್ಯವಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಜಾಗ ಸಹ ಲಭ್ಯವಿದೆ. ಗ್ರಾಮದಲ್ಲಿ ತುಂಬಾ ಬಡವರು ಕೂಲಿ ಕಾರ್ಮಿಕರು ನಿರ್ಗತಿಕರು ವಾಸವಾಗಿದ್ದು ಅವರಿಗೆ ವಾಸಕ್ಕೆ ಮನೆ ಅಥವಾ ನಿವೇಶನ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿರುತ್ತಾರೆ ಎಂದರು.
ಪ್ರತಿವರ್ಷ ಗ್ರಾಪಂ ಗಳಲ್ಲಿ ನಿವೇಶನ ರಹಿತರ ಪಟ್ಟಿ ತಯಾರು ಮಾಡುತ್ತಾರೆ. ಸರ್ಕಾರಕ್ಕೆ ಕಳಿಸಿ ನಿವೇಶನ ಜಾಗಕ್ಕೆ ಬೇಡಿಕೆ ಸಲ್ಲಿಸುತ್ತಿಲ್ಲ. ಆದ್ದರಿಂದ ತುಂಬಾ ತೊಂದರೆ ಆಗಿದ್ದು, ನಿವೇಶನ ಹಂಚಿಕೆ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿರುವುದಿಲ್ಲ ಎಂದರು.
ಕೂಡಲೇ ಗ್ರಾಮ ಠಾಣಾ ಜಾಗದಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಲೇಔಟ್ ಆಗಿ ಪರಿವರ್ತಿಸಿ ಬಡವರಿಗೆ ನಿವೇಶನ ವಿತರಣೆ ಮಾಡಬೇಕು. ಹಾಗೂ ಸದರಿ ಗ್ರಾಪಂ ವ್ಯಾಪ್ತಿಯಲ್ಲಿ 3 ಕೊಳವೆ ಬಾವಿ ಇದ್ದು ಒಂದು ಈಗಾಗಲೇ ಹಾಳಾಗಿ ಹೋಗಿದೆ. ಇನ್ನೆರಡು ನೀರಿನ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಹಾಗಾಗಿ ಹೊಸದಾಗಿ ಒಂದು ಕೊಳವೆ ಬಾವಿ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
SUMMARY | The gram panchayat members have submitted a memorandum to the district collector to provide plots to the landless.
KEYWORDS | gram panchayat, district collector, provide plots,